ಕಾಂಗ್ರೆಸ್ ಪಕ್ಷದೊಳಗೆ ಹಲವು ರೀತಿಯ ಗೊಂದಲಗಳಿವೆ – ರಾಹುಲ್ ದಾರಿ ತಪ್ಪಿದ ಮಗ
ಸಂ.ಕ. ಸಮಾಚಾರ ಕಲಬುರಗಿ: ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕೀಯ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ಸಂಜೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿಗೆ ಚಪ್ಪಲಿ ಎಸೆದ ಘಟನೆ ಉಲ್ಲೇಖಿಸಿ, ಇಂತಹ ಘಟನೆಗಳಿಗೆ ಕಾಂಗ್ರೆಸ್‌ನ ರಾಜಕೀಯ ಧೋರಣೆ ಕಾರಣ ಎಂದು ಆರೋಪಿಸಿದರು. “ನೀವು ‘ಬ್ರದರ್ಸ್’ ಎಂದು ಹೇಳುತ್ತೀರಿ, ಅದರಿಂದಲೇ ಇಂತಹ ಘಟನೆಗಳು ನಡೆಯುತ್ತವೆ. ನಂತರ ಪೊಲೀಸರ ಮೇಲೆ ಒತ್ತಡ ಹೇರುತ್ತಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: “ಭಾರತದಲ್ಲೂ ಹಿಂದೂಗಳ ಸ್ಥಿತಿ ಹೀನಾಯ” – ದಾವಣಗೆರೆಯಲ್ಲಿ ಪೇಜಾವರ ಶ್ರೀಗಳ ಕಳವಳ
“ಎರಡೂ ಕಡೆಯವರ ಬಂಧನ ಯಾಕೆ?” : ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳವರನ್ನು ಬಂಧಿಸುವ ಬದಲು, ತಪ್ಪು ಮಾಡಿದವರನ್ನು ಮಾತ್ರ ಬಂಧಿಸಬೇಕು. ತಪ್ಪು ಮಾಡದವರನ್ನು ಒಳಗೊಂಡು ಸಾಮೂಹಿಕ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.
AI ಸಮ್ಮಿಟ್ ವಿಚಾರ: ಎಐ ಸಮ್ಮಿಟ್ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ಜೋಶಿ, ಈ ರೀತಿಯ ವರ್ತನೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
ರಾಹುಲ್ ಗಾಂಧಿ, ಖರ್ಗೆ ವಿರುದ್ಧ ಟೀಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ತೀವ್ರ ಟೀಕೆ ಮಾಡಿದ ಅವರು, “ರಾಹುಲ್ ದಾರಿ ತಪ್ಪಿದ ಮಗ. ಅವರು ಅಪ್ರಬುದ್ಧ ರಾಜಕಾರಣಿ. ಅವರ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ” ಎಂದು ಹೇಳಿದರು. ಅದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಮಾತನಾಡಿ, ದೇಶದ ಗೌರವ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸ್ವಲ್ಪನಾದರೂ ವಿವೇಕ ಇದ್ದರೆ ಕ್ಷಮೆ ಕೇಳಬೇಕು ಎಂದು ಅಭಿಪ್ರಾಯಪಟ್ಟರು.
ಗ್ಯಾರೆಂಟಿ ಯೋಜನೆಗಳ ವಿವಾದ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಉಚಿತ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದ ವಿಚಾರವನ್ನು ಉಲ್ಲೇಖಿಸಿದ ಜೋಶಿ, “ಗ್ಯಾರೆಂಟಿ ಯೋಜನೆಗಳಿಂದ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂದು ಖರ್ಗೆಯವರೇ ಹೇಳಿದ್ದರು. ಇನ್ಮುಂದೆ ಯಾರೆ ಆಗಲಿ ಗ್ಯಾರೆಂಟಿ ನೀಡುವ ಮೊದಲು ಯೋಚಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ: ‘California’ ಕನಸು ನನಸಾಗುತ್ತಿದೆ
ಕಾಂಗ್ರೆಸ್ ಪಕ್ಷದೊಳಗೆ ಹಲವು ರೀತಿಯ ಗೊಂದಲಗಳಿವೆ ಎಂದು ಎಂದು ಟೀಕಿಸಿದರು























