Home Advertisement
Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಲಾರಿ ಸಮೇತ ಐದು ಟನ್ ಗೋ ಮಾಂಸ ವಶಕ್ಕೆ

ಧಾರವಾಡ: ಲಾರಿ ಸಮೇತ ಐದು ಟನ್ ಗೋ ಮಾಂಸ ವಶಕ್ಕೆ

0
64

ಧಾರವಾಡ: ತಮಿಳನಾಡು ಮೂಲದ ಟ್ರಕ್‌ನಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಐದು ಟನ್ ಗೋಮಾಂಸ ಇದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ತಮಿಳನಾಡು ಪಾಸಿಂಗ್ ಹೊಂದಿದ್ದ ಲಾರಿಯಲ್ಲಿ ಬೆಳಗಾವಿಯಿಂದ ಧಾರವಾಡಕ್ಕೆ ಅಕ್ರಮವಾಗಿ ಗೋಮಾಂಸ ತರಲಾಗುತ್ತಿತ್ತು. ಈ ಕುರಿತು ಹಿಂದೂ ಕಾರ್ಯಕರ್ತರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾರ್ಯಕರ್ತರ ಮಾಹಿತಿ ಆಧರಿಸಿ ಗ್ರಾಮೀಣ ಠಾಣೆ ಪೊಲೀಸರು ನರೇಂದ್ರ ಬೈಪಾಸ್ ಬಳಿ ಲಾರಿ ತಡೆದು ತಪಾಸಣೆ ನಡೆಸಿದಾಗ ಗೋಮಾಂಸ ಇರುವುದು ಗೊತ್ತಾಗಿದೆ. ಸದ್ಯ ಇದನ್ನು ವಶಕ್ಕೆ ಪಡೆದಿದ್ದು, ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಯಾರ ಒಡೆತನದ ಲಾರಿ ಎಂದು ಪರಿಶೀಲಿಸಲಾಗುತ್ತಿದೆ.

Previous articleಧಾರವಾಡ ಹೈಕೋರ್ಟ್ ಪೀಠಕ್ಕೆ ಎರಡನೇ ಬಾರಿ ಬಾಂಬ್ ಬೆದರಿಕೆ
Next articleದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್‌ ಬೆದರಿಕೆ