ಹುಬ್ಬಳ್ಳಿ: ಲಘು ಹೃದಯಾಘಾತಕ್ಕೀಡಾದ ಹಾವೇರಿ ಜಿಲ್ಲೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಲಘು ಹೃದಯಾಘಾತವಾಗಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೃದಯರೋಗ ತಜ್ಞ ಡಾ. ವಿಜಯಕುಮಾರ ಕೋಳೂರ ಅವರು ಶಿವಣ್ಣನವರ ಆರೋಗ್ಯ ಕುರಿತು ಮಾಹಿತಿ ನೀಡಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಎರಡು ರಕ್ತನಾಳಗಳಲ್ಲಿ ಬ್ಲಾಕೇಜ್ ಇತ್ತು. ಒಂದರಲ್ಲಿ ಶೇ. 99 ಮತ್ತೊಂದರಲ್ಲಿ ಶೇ. 90 ರಷ್ಟಿತ್ತು. ಚಿಕಿತ್ಸೆ ನೀಡಿ ಸ್ಟೆಂಟ್ ಅಳವಡಿಸಲಾಗಿದೆ. ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!
ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಗೆ ಬಂದಾಗ ಅವರ ಸಹಜವಾಗಿಯೇ ಇತ್ತು. ಪರಿಶೀಲನೆ ನಡೆಸಿದಾಗ ಎರಡು ರಕ್ತನಾಳದಲ್ಲಿ ಬ್ಲಾಕ್ ಇರುವುದು ಗೊತ್ತಾಯಿತು. ಬಳಿಕ ಚಿಕಿತ್ಸೆ ನೀಡಲಾಗಿದೆ. ಒಂದೆರಡು ದಿನ ಬಿಟ್ಟು ಡಿಸ್‌ಚಾರ್ಜ್ ಮಾಡಲಾಗುವುದು ಎಂದರು.






















