SK Home Ad
Home ಸುದ್ದಿ ದೇಶ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್: 36 ಮಕ್ಕಳು ಅಸ್ವಸ್ಥ

ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್: 36 ಮಕ್ಕಳು ಅಸ್ವಸ್ಥ

0
3

ಪಾಟ್ನಾ: ಬಿಹಾರದ ನಲಂದಾ ಜಿಲ್ಲೆಯ ನೂರ್‌ಸರಾಯ್ ಭಾಗದ ಪರಸಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ವೇಳೆ ಉಪ್ಪಿನ ಬದಲು ವಾಷಿಂಗ್ ಪೌಡರ್ ನೀಡಿದ ಪರಿಣಾಮ ಕನಿಷ್ಠ 36 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದಾರೆ.

ಅಡುಗೆಯ ವೇಳೆ ಸೋಯಾಬಿನ್ ಪಲ್ಯದಲ್ಲಿ ಉಪ್ಪು ಕಡಿಮೆಯಾಗಿದ್ದರಿಂದ ವಿದ್ಯಾರ್ಥಿಗಳು ಹೆಚ್ಚುವರಿ ಉಪ್ಪು ಕೇಳಿದ್ದರು.ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಉಪ್ಪಿನ ಬದಲು ತಪ್ಪಾಗಿ ಡಿಟರ್ಜೆಂಟ್ ಪೌಡರ್‌ಅನ್ನು ಬಡಿಸಿದ್ದಾರೆ.

ಆಹಾರ ಸೇವಿಸಿದ ತಕ್ಷಣ ಮಕ್ಕಳಿಗೆ ಗಂಟಲು ಉರಿ, ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಹಾರ್‌ಶರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.