ಹುಬ್ಬಳ್ಳಿ: ವಿಶ್ವದಾದ್ಯಂತ ಫೆಬ್ರವರಿ 14 ಪ್ರೇಮಿಗಳ ದಿನ. ಈ ದಿನವನ್ನು ಪ್ರೇಮಿಗಳು ತಮ್ಮ ಇಚ್ಛೆ ಅನುಸಾರ ಕಳೆಯುತ್ತಾರೆ. ಪ್ರೀತಿ, ಪ್ರೇಮ, ಪ್ರಣಯ ಹೀಗೆ ದಿನಪೂರ್ತಿ ತಮ್ಮ ಪ್ರೇಯಸಿಯೊಂದಿಗೆ ಸಂಭ್ರಮಿಸುತ್ತಾರೆ. ಆದರೆ, ಭಾರತೀಯರಿಗೆ ಮಾತ್ರ ಈ ದಿನ ಬ್ಲ್ಯಾಕ್ ಡೇ ಎಂದೇ ಹೇಳಲಾಗುತ್ತದೆ.
ಫೆಬ್ರವರಿ 14 ಕೋಟ್ಯಂತರ ಭಾರತೀಯರಿಗೆ ದುಃಖ, ಕೋಪ ಮತ್ತು ಸ್ಮರಣೆಯ ದಿನ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಹೀಗಾಗಿ ಭಾರತದಲ್ಲಿ ಈ ದಿನವನ್ನು ಪ್ರತಿವರ್ಷ ʻಕರಾಳ ದಿನʼ ಎಂದು ಆಚರಿಸಲಾಗುತ್ತದೆ.
ಫೆಬ್ರವರಿ 14, 2019: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ: 76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್
ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಹೊಂಚುಹಾಕಿ ದಾಳಿ ನಡೆಸಲಾಗಿತ್ತು. ಸ್ಫೋಟಕಗಳಿಂದ ತುಂಬಿದ್ದ ವಾಹನದಲ್ಲಿ ಬಂದ ಆತ್ಮಾಹುತಿ ಬಾಂಬರ್ ಸೇನೆಯ ಭದ್ರತಾ ಪಡೆಗಳ ಬಸ್‌ಗೆ ಡಿಕ್ಕಿ ಹೊಡೆಸಿದ್ದು, ಇದ್ದಕ್ಕಿದ್ದಂತೆ ಭೀಕರ ಸ್ಫೋಟವಾಗಿ 40 CRPF ಯೋಧರ ದೇಹಗಳು ಛಿದ್ರ ಛಿದ್ರವಾಗಿದ್ದವು.
ಸ್ಫೋಟದ ಶಬ್ದವು ಹಲವು ಕಿಲೋಮೀಟರ್‌ಗಳವರೆಗೆ ಕೇಳಿಬಂದಿತ್ತು. ಅಲ್ಲದೇ ಸ್ಫೋಟದಿಂದ ಉಂಟಾದ ಬೆಂಕಿ ಮತ್ತು ಹೊಗೆ ಪುಲ್ವಾಮಾ ಸುತ್ತಮುತ್ತಲಿನ ಪ್ರದೇಶವನ್ನೇ ಆವರಿಸಿತ್ತು. ಇದು ಇತಿಹಾಸದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿತ್ತು.
ಇದನ್ನೂ ಓದಿ: ಶಾಲಾ ಬಾಗಿಲಿಗೆ ಸಿಲುಕಿ ತುಂಡಾಯ್ತು ಬಾಲಕಿಯ ಬೆರಳುಗಳು
ಭಾರತದ ಪ್ರತೀಕಾರ: ಪುಲ್ವಾಮಾ ದಾಳಿ ನಡೆದು ಹನ್ನೆರಡು ದಿನಗಳ ನಂತರ ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಭಾರತ ಬಾಂಬ್ ದಾಳಿ ನಡೆಸಿತು. ಜೈಶ್-ಎ-ಮೊಹಮ್ಮದ್ ಶಿಬಿರಗಳ ಮೇಲೆ ಮತ್ತು ಗಡಿ ನಿಯಂತ್ರಣ ರೇಖೆಯಾದ್ಯಂತ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಬಾಲಾಕೋಟ್ ಸೆಕ್ಟರ್‌ನಲ್ಲಿರುವ ಜೆಇಎಂ ಶಿಬಿರವನ್ನು ಸಂಪೂರ್ಣ ನಾಶ ಮಾಡಲಾಯಿತು.
ಫೆ. 14 ಹುತ್ಮಾತರ ಸ್ಮರಣೆ: ಈ ದಿನವನ್ನು ಪ್ರೇಮಿಗಳ ದಿನದ ಬದಲಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಫೆಬ್ರವರಿ 14ರಂದು ಭಾರತದಲ್ಲಿ ಕರಾಳ ದಿನ ಆಚರಿಸಲಾಗುತ್ತದೆ.























