Home Advertisement
Home ಕ್ರೀಡೆ U-19 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ನೀತಾ ಅಂಬಾನಿ ಅಭಿನಂದನೆ

U-19 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ನೀತಾ ಅಂಬಾನಿ ಅಭಿನಂದನೆ

0
25

ಮುಂಬೈ: ಐಸಿಸಿ 19ರ ವಯೋಮಿತಿಯ ಏಕದಿನ ಕ್ರಿಕೆಟ್​ ವಿಶ್ವಕಪ್ ಪ್ರಶಸ್ತಿಯನ್ನು ದಾಖಲೆಯ ಆರನೇ ಬಾರಿ ಗೆದ್ದುಕೊಂಡಿರುವ ಭಾರತದ ಕಿರಿಯರ ತಂಡವನ್ನು ನೀತಾ ಎಂ. ಅಂಬಾನಿ ಅವರು ಅಭಿನಂದಿಸಿದ್ದಾರೆ. ʻವಿಶ್ವಕಪ್​ ಗೆದ್ದ ನಮ್ಮ ಹುಡುಗರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಜವಾಗಿಯೂ ಐತಿಹಾಸಿಕ ಮತ್ತು ಸ್ಫೂರ್ತಿದಾಯಕ ಸಾಧನೆ’ ಎಂದು ಹೇಳಿದರು.

ಜಿಂಬಾಬ್ವೆಯ ಹರಾರೆಯಲ್ಲಿ ಶುಕ್ರವಾರ ನಡೆದ ಐಸಿಸಿ 19 ವಯೋಮಿತಿ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಆಯುಷ್​ ಮಹಾತ್ರೆ ನೇತೃತ್ವದ ಭಾರತ ತಂಡ ಇಂಗ್ಲೆಂಡ್​ ಎದುರು 100 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಅಜೇಯವಾಗಿ ಪ್ರಶಸ್ತಿ ಜಯಿಸಿದ ಸಾಧನೆಯನ್ನೂ ಮಾಡಿತು.

‘ನೀವು ನಿಮ್ಮ ವಯಸ್ಸನ್ನು ಮೀರಿದ ಧೈರ್ಯ, ಶಿಸ್ತು ಮತ್ತು ನಂಬಿಕೆಯೊಂದಿಗೆ ಆಡಿದ್ದೀರಿ. ಈ ಗೆಲುವು ಬರೀ ಟ್ರೋಫಿಯದ್ದಲ್ಲ. ಇದು ಯುವ ಭಾರತದ ಚೈತನ್ಯದ ಪ್ರಬಲ ಸಂಕೇತವಾಗಿದೆ. ನಿರ್ಭೀತಿಯ ಮಹತ್ವಾಕಾಂಕ್ಷೆ, ಸಂಘಟಿತ ಒಗ್ಗಟ್ಟು ಮತ್ತು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ನಿರಂತರತೆಯನ್ನೂ ಪ್ರತಿಬಿಂಬಿಸಿದೆ’ ಎಂದು ನೀತಾ ಅಂಬಾನಿ ಅವರು ಪ್ರಶಂಸಿಸಿದರು.

ಈ ಗೆಲುವು ಮುಂದಿನ ಹಲವು ದೊಡ್ಡ ಮೈಲಿಗಲ್ಲುಗಳ ಆರಂಭವಾಗಲಿ’ ಎಂದು ಹಾರೈಸಿರುವ ನೀತಾ ಅಂಬಾನಿ ಅವರು, ನಿಮ್ಮ ಕಾರಣದಿಂದಾಗಿ ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿ ಹೊಳೆಯುತ್ತಿದೆ ಎಂದರು.

ಯುವ ಬ್ಯಾಟಿಂಗ್​ ಸೆನ್ಸೇಶನ್​ ವೈಭವ್​ ಸೂರ್ಯವಂಶಿ (175 ರನ್​, 80 ಎಸೆತ, 15 ಬೌಂಡರಿ, 15 ಸಿಕ್ಸರ್​) ಸ್ಫೋಟಕ ಶತಕದ ಸಾಹಸದಿಂದ ಭಾರತ ಕಿರಿಯರ ತಂಡ 50 ಓವರ್​ಗಳಲ್ಲಿ 9 ವಿಕೆಟ್​ಗೆ 411 ರನ್​ ಕಲೆಹಾಕಿತು. ಪ್ರತಿಯಾಗಿ ಇಂಗ್ಲೆಂಡ್​ ತಂಡ 40.2 ಓವರ್​ಗಳಲ್ಲಿ 311 ರನ್​ಗಳಿಗೆ ಆಲೌಟ್​ ಆಗಿ ಸೋಲು ಅನುಭವಿಸಿತು. ಭಾರತ 2022ರ ಕಿರಿಯರ ವಿಶ್ವಕಪ್​ನಲ್ಲೂ ಇಂಗ್ಲೆಂಡ್​ ವಿರುದ್ಧವೇ ಫೈನಲ್​ನಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಒಲಿಸಿಕೊಂಡಿತ್ತು. 14 ವರ್ಷದ ವೈಭವ್​ ಸೂರ್ಯವಂಶಿ ಫೈನಲ್​ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು.

Previous articleಸಿಎಂ ಬದಲಾವಣೆ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ
Next articleMetro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್‌