Home Advertisement
Home ಸುದ್ದಿ ದೇಶ ಯುಮ್‌ನಾಮ್ ಖೇಮ್‌ಚಂದ್ ಸಿಂಗ್ ಮಣಿಪುರದ ನೂತನ ಸಿಎಂ

ಯುಮ್‌ನಾಮ್ ಖೇಮ್‌ಚಂದ್ ಸಿಂಗ್ ಮಣಿಪುರದ ನೂತನ ಸಿಎಂ

0
238

ಇಂಫಾಲ್​(ಮಣಿಪುರ): ಮಣಿಪುರದ ನೂತನ ಮುಖ್ಯಮಂತ್ರಿಯನ್ನಾಗಿ ಹಿರಿಯ ನಾಯಕ ಯುಮ್‌ನಾಮ್ ಖೇಮ್‌ಚಂದ್ ಸಿಂಗ್ ಅವರನ್ನು ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಇಂಫಾಲ್​ದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅಂತಿಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಮೂಲಕ ರಾಷ್ಟ್ರಪತಿ ಆಳ್ವಿಕೆ ಅಂತ್ಯವಾಗಲಿದೆ.

62 ವರ್ಷದ ಖೇಮ್‌ಚಂದ್ ಸಿಂಗ್ ಅವರು ಮೈತೇಯಿ ಸಮುದಾಯದವರಾಗಿದ್ದು, 2017 ರಿಂದ ಸಿಂಗ್ಜಮೇಯಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದು, ವಸತಿ ಸಚಿವರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ: ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ವರ್ಷ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ 2025ರ ಫೆಬ್ರವರಿ 13ರಂದು ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. ಕುಕಿ–ಜೊ ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಉದ್ವಿಗ್ನತೆ ಹೆಚ್ಚಾಗಿ ಹಿಂಸಾಚಾರದ ಸ್ವರೂಪ ಪಡೆದಿತ್ತು. ಪ್ರಸ್ತುತ ಜಾರಿಯಲ್ಲಿರುವ ರಾಷ್ಟ್ರಪತಿ ಆಳ್ವಿಕೆ ಫೆಬ್ರವರಿ 12ರಂದು ಮುಕ್ತಾಯಗೊಳ್ಳಲಿದೆ.