Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಮಾರಿಕಾಂಬಾ ದರ್ಶನಕ್ಕೆ ಬಂದಿದ್ದ ಕಾಗೋಡು ತಿಮ್ಮಪ್ಪ ಅಸ್ವಸ್ಥ

ಮಾರಿಕಾಂಬಾ ದರ್ಶನಕ್ಕೆ ಬಂದಿದ್ದ ಕಾಗೋಡು ತಿಮ್ಮಪ್ಪ ಅಸ್ವಸ್ಥ

0
70

ಸಾಗರ: ಮಾರಿಕಾಂಬಾ ದೇವಿ ಜಾತ್ರೆಯ ಮೊದಲ ದಿನ ಜನಸಾಗರದ ನಡುವೆ ದೇವಿ ದರ್ಶನಕ್ಕೆ ಬಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಭಕ್ತರ ನೂಕು ನುಗ್ಗಲಿನ ನಡುವೆ ಕುಸಿದು ಬಿದ್ದ ಘಟನೆ ನಡೆದಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅಮ್ಮನವರ ದರ್ಶನಕ್ಕೆ ಬಂದಿದ್ದ ಅವರು, ತೀವ್ರ ಜನದಟ್ಟಣೆಯಿಂದ ಅಸ್ವಸ್ಥಗೊಂಡು ಕುಸಿದು ಬಿದ್ದರು. ಎಲ್ಲ ಕಡೆ ಬ್ಯಾರಿಕೇಡ್ ಹಾಕಿದ್ದರಿಂದ ಅಂಬ್ಯುಲೆನ್ಸ್ ಸಹ ಒಳಗೆ ಬರಲು ಸಾಧ್ಯವಾಗದೆ ಇದ್ದುದರಿಂದ ಕಾರ್ಯಕರ್ತರು ಅವರನ್ನು ಕಷ್ಟಪಟ್ಟು ವಾಹನದ ಮೂಲಕ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದರು. ವೈದ್ಯ ಡಾ. ವಿಕ್ರಮ್ ತಕ್ಷಣ ಚಿಕಿತ್ಸೆ ನೀಡಿದ ನಂತರ ಕಾಗೋಡು ಸುಧಾರಿಸಿಕೊಂಡಿದ್ದಾರೆ.

ಹಿಂದಿನ ಎಲ್ಲ ವರ್ಷಗಳಿಗಿಂತ ಈ ವರ್ಷ ಅತಿಹೆಚ್ಚು ಭಕ್ತರು ಅಮ್ಮನವರ ದರ್ಶನಕ್ಕೆ ಬಂದಿರುವುದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಬಂದೋಬಸ್ತ್ ಹೆಸರಿನಲ್ಲಿ ಜನರನ್ನು ತಡೆಯುತ್ತಿದ್ದದು ಅಸಮಾಧಾನ ತಂದರೂ ಎಲ್ಲೋ ಒಂದು ಕಡೆ ನೂಕುನುಗ್ಗಲು ನಿಯಂತ್ರಣಕ್ಕೂ ಈ ಘಟನೆಗೆ ಕಾರಣವಾಯಿತು.

Previous articleಲಕ್ಷಾಂತರ ಭಕ್ತರ ಮಧ್ಯೆ ಉಳವಿ ಶ್ರೀ ಚೆನ್ನಬಸವೇಶ್ವರ ರಥೋತ್ಸವ
Next articleಯುಮ್‌ನಾಮ್ ಖೇಮ್‌ಚಂದ್ ಸಿಂಗ್ ಮಣಿಪುರದ ನೂತನ ಸಿಎಂ