ನವದೆಹಲಿ: 7 ಹೈಸ್ಪೀಡ್ ರೈಲು ಕಾರಿಡಾರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಹೈಸ್ಪೀಡ್ ರೈಲು ಅನುಕೂಲ ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆಗೂ ದೊರೆಯಲಿದೆ.
ಮುಂಬೈ-ಪುಣೆ, ಪುಣೆ ಹೈದರಾಬಾದ್, ಹೈದರಾಬಾದ್-ಚೆನ್ನೈ, ಬೆಂಗಳೂರು-ಚೆನ್ನೈ, ದೆಹಲಿ-ವಾರಣಾಸಿ, ವಾರಣಾಸಿ-ಸಿಲಿಗುರಿ. ಈ ಯೋಜನೆ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಯೋಜನೆ.
ಸಣ್ಣ ಕೈಗಾರಿಕೆಗೆ ಉತ್ತೇಜನೆ: ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರ 10,000 ಕೋಟಿ ಮೊತ್ತದ SME ಬೆಳವಣಿಗೆ ನಿಧಿಯನ್ನು ಪ್ರಸ್ತಾಪಿಸಿದೆ. ಇದರೊಂದಿಗೆ ಅತಿಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು 2,000 ಕೋಟಿ ಮೊತ್ತದ ಆತ್ಮನಿರ್ಭರ ಭಾರತ ನಿಧಿಯನ್ನು ಮೀಸಲಿಡಲಾಗಿದೆ.




















