ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ತಮ್ಮ ನಡೆ ಮತ್ತು ನಿಲುವುಗಳ ಬಗ್ಗೆ ಭಾನುವಾರ ಸ್ಪಷ್ಟನೆ ನೀಡಿದ್ದಾರೆ. ಹಾಗೇ “ನಾನು ಯಾವತ್ತೂ ಗುಂಪುಗಾರಿಕೆ ಮಾಡುವುದಿಲ್ಲ ಮತ್ತು ಯಾರ ಬೆನ್ನಿಗೂ ಚೂರಿ ಹಾಕುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಒತ್ತಿ ಹೇಳಿದರು. “ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದು ನಮ್ಮ ಜವಾಬ್ದಾರಿ. 2028ರ ಚುನಾವಣೆಯೇ ನಮ್ಮ ಮುಂದಿನ ಗುರಿ” ಎಂದು ಹೇಳಿದರು.
ಪಕ್ಷದಲ್ಲಿನ ಪ್ರಭಾವದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ, ತಮ್ಮ ನಡೆಯು ಸಾಮೂಹಿಕ ನಾಯಕತ್ವದ ಕಡೆಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ಎಂಟು-ಹತ್ತು ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ದೊಡ್ಡ ವಿಚಾರವಲ್ಲ” ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷನಾಗಿ ತಮ್ಮ ಪಾತ್ರದ ಬಗ್ಗೆ ವಿವರಿಸಿದರು. “ನಾನು ಅಧ್ಯಕ್ಷ ಸ್ಥಾನದಲ್ಲಿ ಇರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ನಮ್ಮ 140 ಶಾಸಕರೂ ನಮ್ಮ ನಾಯಕರೇ. ಹೀಗಾಗಿ ಯಾರಿಗೂ ತಾರತಮ್ಯ ಮಾಡಲ್ಲ” ಎಂದು ಹೇಳಿದರು. ಈ ಮೂಲಕ ಒಗ್ಗಟ್ಟಿನ ಸಂದೇಶ ತಿಳಿಸಿದರು.
ಪಕ್ಷಗಳಿಗೆ ಪ್ರತ್ಯುತ್ತರ: ಕುಮಾರಸ್ವಾಮಿ ಟೀಕೆ ಮತ್ತು ಬಿಜೆಪಿ ವ್ಯಂಗ್ಯಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿಂದಿನ ಸಮ್ಮಿಶ್ರ ಸರ್ಕಾರದ ಸಂಬಂಧದ ಬಗ್ಗೆ ಕೇಳಿದಾಗ, “ನಾನು ಕುಮಾರಸ್ವಾಮಿ ಅವರ ಜತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ.
ಅದನ್ನು ಕುಮಾರಸ್ವಾಮಿ ಒಪ್ಪದೇ ಇರಬಹುದು, ಆದರೆ ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಮತ್ತು ನನ್ನ ಪ್ರಯತ್ನ ಆ ದೇವರಿಗೆ ಗೊತ್ತಿದೆ. ಅವರ ಸರ್ಕಾರ ಉಳಿಸಲು ಕೊನೆಯ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆಂದು ಅವರ ತಂದೆ ಎಚ್.ಡಿ. ದೇವೇಗೌಡರಿಗೂ ಗೊತ್ತಿದೆ” ಎಂದರು. ಅವರು ತಮ್ಮ ಆಸೆಗೆ ಏನು ಬೇಕಾದರೂ ಮಾತನಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಇತ್ತೀಚೆಗೆ ಬಿಜೆಪಿ ನಾಯಕರು ‘ಶಿವಕುಮಾರ್ ಸೂಪರ್ ಸಿಎಂ ಆಗುತ್ತಿದ್ದಾರೆ’ ಎಂದು ಟೀಕೆ ಮಾಡುತ್ತಿರುವ ಬಗ್ಗೆ ಮಾತನಾಡಿದರು. “ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳಲು ಆಗುತ್ತದೆಯೇ” ಎಂದು ವ್ಯಂಗ್ಯವಾಡಿದರು.
ಸಭೆಯ ಉದ್ದೇಶ: ರಾಜಕೀಯ ಉದ್ದೇಶಗಳಿಗಾಗಿ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ನೀರಾವರಿ, ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಕುರಿತು ಚರ್ಚಿಸಲು ಕೇಂದ್ರ ಸಚಿವರು ಮತ್ತು ಸಂಸದರ ಭೇಟಿಯಾಗುವು ಅನಿರ್ವಾಯವಾಗಿತ್ತು ಎಂದರು.
ಹೀಗಾಗಿ ಕೆಲವು ಚರ್ಚಿ ನಡೆಸಲು ಎಲ್ಲ ಸಂಸದರು ಭಾಗವಹಿಸುವ ಸರ್ವಪಕ್ಷ ಸಭೆಯನ್ನು ದೆಹಲಿಯಲ್ಲಿ ನಡೆಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಆದರೆ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯನ್ನು ರಾಜಕೀಯಗೊಳಿಸಿದ ಮಾಧ್ಯಮ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, “ಅಪ್ಪ, ಮಗನ ಭೇಟಿಗೂ ನೀವು ಅರ್ಥ ಕಲ್ಪಿಸುತ್ತೀರಾ? ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕೇ?” ಎಂದು ಪ್ರಶ್ನಿಸಿದರು. ಇದು ಎಐ ತಂತ್ರಜ್ಞಾನದ ಕುರಿತು ಮಾಹಿತಿ ಪಡೆಯುವ ಸಭೆಯಾಗಿತ್ತು ಎಂದು ಸ್ಪಷ್ಟಪಡಿಸಿದರು.
























Catching the game live on fb88tivi is brilliant. The stream’s usually pretty decent and it’s handy being able to stick a bet on at the same time. Worth bookmarking! Watch live here: fb88tivi