Home Advertisement
Home ಅಪರಾಧ ಒಂಟಿ ಮಹಿಳೆ ಇದ್ದ ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ

ಒಂಟಿ ಮಹಿಳೆ ಇದ್ದ ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ

0
127

ಮಂಗಳೂರು: ಬಟ್ಟೆ ಅಂಗಡಿಯಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ನವೀನ್ ಕುಂಪಲ ಮತ್ತು ಇತರ ಮೂರು ಮಂದಿಯ ತಂಡ, ಆಕೆಯನ್ನು ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ ಮತ್ತು ಇತರ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಡೆದಿದೆ.
ಮಾರ್ಚ್ ೧೮ ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ. ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶಿಸಿದ ನಾಲ್ಕು ಮಂದಿಯ ತಂಡ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತಮ್ಮ ಬ್ಯಾಗಿನೊಳಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆರೋಪಿಗಳು “ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು, ನಮ್ಮ ಸುದ್ದಿಗೆ ಬಂದ್ರೆ ಜಾಗ್ರತೆ” ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Previous articleಅಕ್ರಮ ಮರಳುಗಾರಿಕೆ, ಅಕ್ರಮ ಬಾಕ್ಸೈಟ್ ಘಟಕಕ್ಕೆ ದಿಢೀರ್‌ ದಾಳಿ
Next articleಕಬ್ಬೂರು ಸರ್ಕಾರಿ ಗೋಮಾಳ-ಕೆರೆ ಒತ್ತುವರಿ: ಸಾವಿರಾರು ಅಡಿಕೆ ಮರಗಳ ತೆರವು