SK Home Ad
Home ತಾಜಾ ಸುದ್ದಿ ಹಿಂದೂ ವಿವಾಹ ಪವಿತ್ರವಾದ್ದು ವರ್ಷದಲ್ಲಿ ವಿಚ್ಛೇದನ ಅಸಾಧ್ಯ

ಹಿಂದೂ ವಿವಾಹ ಪವಿತ್ರವಾದ್ದು ವರ್ಷದಲ್ಲಿ ವಿಚ್ಛೇದನ ಅಸಾಧ್ಯ

0
171

ಲಖನೌ: ಹಿಂದೂ ಗಂಡು ಹೆಣ್ಣಿನ ನಡುವಿನ ವಿವಾಹವು ಪವಿತ್ರವಾಗಿದ್ದು ಪರಸ್ಪರ ಹೊಂದಾಣಿಕೆ ಇಲ್ಲ ಎಂಬ ಕಾರಣಕ್ಕಾಗಿ ಮದುವೆಯಾಗಿ ಒಂದು ವರ್ಷವಾಗದ ಹಿನ್ನೆಲೆಯಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಹಿಂದೂ ವಿವಾಹ ಕಾಯಿದೆ ೧೯೫೫ರ ಸೆಕ್ಷನ್ ೧೪ರ ಅಡಿಯಲ್ಲಿ ಒದಗಿಸಲಾದ ಅಸಾಧಾರಣ ಆಧಾರಗಳಿದ್ದಾಗ ಮಾತ್ರ ವಿಚ್ಛೇದನವನ್ನು ಅನುಮತಿಸಲಾಗಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ.
೧೯೫೫ರ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ ೧೩-ಬಿ ಅಡಿಯಲ್ಲಿ ಕಕ್ಷಿದಾರರು ಪರಸ್ಪರ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಸಹರನ್‌ಪುರದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಮದುವೆಯಾಗಿ ಒಂದು ವರ್ಷವಾಗದೆ ಇರುವುದರಿಂದ ಅದನ್ನು ತಿರಸ್ಕರಿಸಿದ್ದರು.
ನ್ಯಾ. ಅಶ್ವನಿ ಕುಮಾರ್ ಮಿಶ್ರಾ ಮತ್ತು ನಾ. ಡೊನಾಡಿ ರಮೇಶ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಸೆಕ್ಷನ್ ೧೪ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮದುವೆಯ ದಿನಾಂಕದಿಂದ ಒಂದು ವರ್ಷದ ಮಿತಿ ಇರಬೇಕು ಎಂದು ಹೇಳಿದರು.

ಕೋರ್ಟ್ ಹೇಳಿದ್ದೇನು?
* ಅಸಾಧಾರಣ ಆಧಾರ ವಿದ್ದಾಗಷ್ಟೇ ವರ್ಷದಲ್ಲಿ ವಿಚ್ಛೇದನ ಸಾಧ್ಯ
* ಪರಸ್ಪರ ಅಸಾಮರಸ್ಯ, ದಿನನಿತ್ಯದ ಸಮಸ್ಯೆಗಳು ವಿಚ್ಛೇದನಕ್ಕೆ ಅಸಾಧಾರಣ ಆಧಾರಗಳಾಗವು
* ಅರ್ಜಿಯಲ್ಲಿ ಉಲ್ಲೇಖಿತ ಕಾರಣಗಳು ಡಿವೋರ್ಸ್ ಪಡೆಯಲು ಸಾಕಾಗಲ್ಲ
* ಹಿಂದೂ ವಿವಾಹ ಪವಿತ್ರವಾದದ್ದು, ಒಂದು ವರ್ಷದೊಳಗೆ ವಿಚ್ಛೇದನ ಅಸಾಧ್ಯ