Home Advertisement
Home ನಮ್ಮ ಜಿಲ್ಲೆ ಗದಗ ಬೊಮ್ಮಾಯಿ ಗೆಲುವಿಗೆ ವಿಶೇಷ ಪೂಜೆ

ಬೊಮ್ಮಾಯಿ ಗೆಲುವಿಗೆ ವಿಶೇಷ ಪೂಜೆ

0
134

ಲಕ್ಷ್ಮೇಶ್ವರ: ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿಯಾಗಲಿ, ಗದಗ-ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಲಿ ಎಂದು ಸೋಮವಾರ ಬಿಜೆಪಿ ನಗರ ಘಟಕ, ಯುವ ಮೋರ್ಚಾದಿಂದ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ದೇಶದಲ್ಲಿ ಮತ್ತೆ ಮೋದಿ ಅಲೆ ಇರುವದು ಸಾಭೀತಾಗಿದ್ದು, ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವದಾಗಿ ಹೇಳುತ್ತಿದ್ದು, ಸಮೀಕ್ಷೆ ಮೀರಿ ಬಿಜೆಪಿ ಈ ಭಾರಿ ೪೦೦ಕ್ಕೂ ಅಧಿಕ ಸ್ಥಾನ ಪಡೆದು ಮೂರನೇ ಬಾರಿಗೆ ಮೋದಿಯವರು ಪ್ರಧಾನಿ ಆಗಲಿದ್ದಾರೆ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ೨ ಲಕ್ಷಗಳಿಗಿಂತಲೂ ಅಧಿಕ ಮತಗಳಿಂದ ಭರ್ಜರಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.