Home Advertisement
Home ತಾಜಾ ಸುದ್ದಿ ಯತ್ನಾಳಗೆ ಮಹಿಳೆಯರಿಂದ ತಡೆ, ಇನ್ನೊಂದಡೆ ಕಾಶಪ್ಪನವರ ಎದುರು ಮೋದಿಗೆ ಜೈಕಾರ

ಯತ್ನಾಳಗೆ ಮಹಿಳೆಯರಿಂದ ತಡೆ, ಇನ್ನೊಂದಡೆ ಕಾಶಪ್ಪನವರ ಎದುರು ಮೋದಿಗೆ ಜೈಕಾರ

0
100

ಇಳಕಲ್: ಶುಕ್ರವಾರ ರಾತ್ರಿ ಭಾಷಣಕ್ಕೆಂದು ಬರುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಮಹಿಳೆಯರು ಅಡ್ಡಗಟ್ಟಿದರೆ ಇನ್ನೊಂದೆಡೆ ಯತ್ನಾಳ ಭಾಷಣ ಮುಗಿದಾಗ ಕಂಠಿ ಸರ್ಕಲ್‌ಗೆ ಬಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಯುವಕರ ದಂಡು ಮೋದಿ ಮೋದಿ ಎಂದು ಕೂಗು ಹಾಕಿದ ಘಟನೆ ನಡೆಯಿತು.
ಬಸವೇಶ್ವರ ಸರ್ಕಲ್ ಮಾರ್ಗ ವಾಗಿ ಕಂಠಿ ಸರ್ಕಲ್ ಗೆ ಬರುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಅಡ್ಡಗಟ್ಟಿದ ಕೆಲ ಮಹಿಳೆಯರು ಏನೇನೋ ಮಾತನಾಡುತ್ತಾ ಸಮಯ ವ್ಯಯ ಮಾಡಿ ಅವರು ಭಾಷಣಕ್ಕೆ ಹೋಗದಂತೆ ನೋಡಿದರೂ ಅಲ್ಲಿಂದ ಬಸನಗೌಡ ಪಾಟೀಲ ೯-೪೫ಕ್ಕೆ ಕಂಠಿ ಸರ್ಕಲ್ ಗೆ ಬಂದು ಭಾಷಣ ಆರಂಭಿಸಿ ಇಳಕಲ್ ಪಾಕಿಸ್ತಾನದಲ್ಲಿ ಇದೆಯೇ ಎಂದು ಪ್ರಶ್ನಿಸುತ್ತಾ ಹೆಂಗಸರನ್ನು ಮುಂದೆ ಮಾಡಿ ನನಗೆ ಅಡ್ಡ ಹಾಕಿದ್ದಾರೆ ಎಂದು ಕುಟುಕಿದರು.
ಹತ್ತು ಗಂಟೆಗೆ ಇನ್ನೂ ಎರಡು ನಿಮಿಷ ಇದ್ದಾಗಲೇ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹಿಂಬಾಲಿಸಿದರು. ಭಾಷಣಕ್ಕೆ ಕೂಡಿದ ಸಾವಿರಾರು ಜನರು ಮನೆಗೆ ಮರಳುತ್ತಿದ್ದಾಗ ಅದೇ ದಾರಿಯಲ್ಲಿ ಬಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಯುವಕರು ಸುತ್ತುವರೆದು ಮೋದಿ ಮೋದಿ ಎಂದು ಕೂಗಾಡ ತೊಡಗಿದರು.