SK Home Ad
Home ಅಪರಾಧ ಬೈಕ್ ಡಿಕ್ಕಿ: ಎಂಎಲ್ಸಿ ಅರವಿಂದ್ ಅರಳಿ ತಾಯಿ ಸಾವು

ಬೈಕ್ ಡಿಕ್ಕಿ: ಎಂಎಲ್ಸಿ ಅರವಿಂದ್ ಅರಳಿ ತಾಯಿ ಸಾವು

0
105


ಕಲಬುರಗಿ: ರಸ್ತೆ ದಾಟುತ್ತಿದ್ದ ವೇಳೆ ಅತಿ ವೇಗದಿಂದ ಬಂದ ಬೈಕೊಂದು ಡಿಕ್ಕಿ ಹೊಡೆದಿದ್ದರಿಂದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ
ಬುಧವಾರ ಸಂಜೆ ನಗರದ ಸೇಡಂ ರಿಂಗ್ ರೋಡ್ ಹತ್ತಿರದ ಟೊಯೋಟಾ ಷೋರೂಮ್ ಬಳಿ ಸಂಭವಿಸಿದೆ.
ಬೀದರ್ ನ ವಿಧಾನ ಪರಿಷತ್ ಸದಸ್ಯ ಅರವಿಂದ್ ಕುಮಾರ್ ಅರಳಿ ಅವರ ತಾಯಿ ಸುಮಿತ್ರಾ ಶ್ಯಾಮರಾವ್ ಅರಳಿ (75) ಮೃತಪಟ್ಟವರು.

ಕಲಬುರಗಿಯ ಬಡೆಪುರ್ ಕಾಲೋನಿ ನಿವಾಸಿಯಾದ ಇವರು
ರಸ್ತೆ ದಾಟುವಾಗ ಸೇಡಂ ರಿಂಗ್ ರೋಡ್ ದಿಂದ್ ಹುಮ್ನಾಬಾದ್ ರಿಂಗ್ ರೋಡ್ ಕಡೆ ಹೋಗುವ ಮೋಟಾರ್ ಸೈಕಲ್ ವಾಹನ ಅತಿವೇಗ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಯಿತು ಎಂದು ಹೇಳಲಾಗಿದೆ.
ತೀವ್ರವಾಗಿ ಗಾಯಗೊಂಡ ಸುಮಿತ್ರ ಅವರನ್ನು ಹತ್ತಿರದ ಮಣ್ಣೂರ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟರು.
ಪೊಲೀಸ್ ಆಯುಕ್ತ ಚೇತನ್ ಆರ್. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಬಗ್ಗೆ ಮೃತರ ಮಗಳು ಶೀಲಾದೇವಿ ನಿಂಗರಾಜ್ ಅರಸ ದೂರು ನೀಡಿದ್ದು, ಸಂಚಾರಿ ಠಾಣೆ -2ರಲ್ಲಿ ಪ್ರಕರಣ ದಾಖಲಾಗಿದೆ.

ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆಯನ್ನು ಡಿಸೆಂಬರ್ 14ರಂದು (ಗುರುವಾರ) ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮ ಹಳ್ಳಿಖೇಡದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದವರು ತಿಳಿಸಿದ್ದಾರೆ.