SK Home Ad
Home ಸಿನಿ ಮಿಲ್ಸ್ ಗಾನವಿ, ಸೌಂದರ್ಯ, ಗಗನ್‌ಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್; ಅಸಲಿ ಸತ್ಯ ಬಾಯ್ಬಿಟ್ಟ ಚಿನ್ನಪ್ಪ!

ಗಾನವಿ, ಸೌಂದರ್ಯ, ಗಗನ್‌ಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್; ಅಸಲಿ ಸತ್ಯ ಬಾಯ್ಬಿಟ್ಟ ಚಿನ್ನಪ್ಪ!

0
34

BBK13: ಬಿಗ್ ಬಾಸ್ ಕನ್ನಡ ಸೀಸನ್ 13 ಫಿನಾಲೆಯ ಸಮೀಪಿಸುತ್ತಿರುವ ಹೊತ್ತಿನಲ್ಲಿ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿದ್ದಾರೆ. ಸೌಂದರ್ಯ ಶೆಟ್ಟಿ ಅತಿ ಹೆಚ್ಚು ಕೆಟ್ಟ ಪದ ಬಳಸಿದರೂ ಶೋ ತಂಡ ಕ್ರಮ ಕೈಗೊಂಡಿಲ್ಲ ಎಂದು ಗಾನವಿ ಗೌಡ ಮಾಡಿದ್ದ ಆರೋಪದ ಕುರಿತು ಸುದೀಪ್ ಪ್ರಶ್ನೆ ಎತ್ತಿದರು. ‘ಮಹಾರಾಣಿ’ ಟಾಸ್ಕ್ ವೇಳೆ ಸೌಂದರ್ಯ ಮತ್ತು ಗಾನವಿ ನಡುವೆ ನಡೆದ ಜಗಳ, ವೈಯಕ್ತಿಕ ನಿಂದನೆ ಹಾಗೂ ರಿಲೇಶನ್‌ಶಿಪ್ ವಿಚಾರಗಳು ಚರ್ಚೆಗೆ ಬಂದವು. ಕಿರಣ್ ಶಾಸ್ತ್ರಿ ಮತ್ತು ಧನುಷ್ ಕೂಡ ತಮ್ಮ ಹಾಗೂ ಕುಟುಂಬದ ಮೇಲೆ ಕೆಟ್ಟ ಪದ ಬಳಸಲಾಗುತ್ತಿದೆ ಎಂದು ದೂರಿದರೆ, ಪ್ರಚೋದನೆ ನೀಡಿದ್ದಕ್ಕೆ ಹಾಗೆ ಮಾತನಾಡಿದ್ದಾಗಿ ಸೌಂದರ್ಯ ಸಮರ್ಥಿಸಿಕೊಂಡರು. ವೈಯಕ್ತಿಕ ವಿಚಾರ ಎಳೆಯಬೇಡಿ, ಕೆಟ್ಟ ಪದ ಬಳಸುವುದು ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸುದೀಪ್, ಗಾನವಿ ಅವರ ಹಿಂದಿನ ತಪ್ಪನ್ನೂ ನೆನಪಿಸಿ, ಬಿಗ್ ಬಾಸ್ ತಂಡ ಹಾಗೂ ಜನತೆಗೆ ಕ್ಷಮೆ ಕೇಳುವಂತೆ ಸೂಚಿಸಿದರು.

ಇದೇ ವೇಳೆ, ಮನೆಯಲ್ಲಿ ಮೂರು ಮಹಿಳಾ ಸ್ಪರ್ಧಿಗಳಿದ್ದರೂ “ನಾಲ್ಕು ಹೆಣ್ಣುಮಕ್ಕಳು ಇರುವುದಲ್ಲವೇ” ಎಂದು ಗಗನ್ ಚಿನ್ನಪ್ಪ ನಕ್ಕು ಹೇಳಿದ್ದ ಮಾತು ದೊಡ್ಡ ವಿವಾದಕ್ಕೆ ಕಾರಣವಾಯಿತು. ಮೊದಲು ಸೋನಿಕಾ ಹೆಸರು ಹೇಳಿ ನುಣುಚಿಕೊಳ್ಳಲು ಗಗನ್ ಯತ್ನಿಸಿದರೂ, ವಿಡಿಯೋ ತುಣುಕು ಪ್ರದರ್ಶಿಸಿ ಸುದೀಪ್ ಚೆಕ್‌ಮೇಟ್ ಮಾಡಿದರು. ಅಂತಿಮವಾಗಿ ಯಶಸ್ ಅವರನ್ನು ಉದ್ದೇಶಿಸಿ ಹಾಗೆ ಹೇಳಿದ್ದಾಗಿ ಗಗನ್ ಸತ್ಯ ಒಪ್ಪಿಕೊಂಡರು.

ಈ ಬೆಳವಣಿಗೆಗಳ ನಡುವೆ ವಿಶೇಷ ಟಾಸ್ಕ್ ಗೆದ್ದು ಇಡೀ ಸೀಸನ್ ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರ ಪಡೆದಿದ್ದ ಯಶಸ್, ಆ ಅಧಿಕಾರವನ್ನು ಗಗನ್ ಮೇಲೆಯೇ ಬಳಸಿ ತಿರುಗೇಟು ನೀಡಿದರು. ಫಿನಾಲೆಯ ಹಂತದಲ್ಲಿ ನಡೆದ ಈ ಘಟನೆಗಳು ಬಿಗ್ ಬಾಸ್ ಮನೆಯ ಆಟದ ಲೆಕ್ಕಾಚಾರವನ್ನು ಮತ್ತಷ್ಟು ತೀವ್ರಗೊಳಿಸಿವೆ.