SK Home Ad
Home ಸಿನಿ ಮಿಲ್ಸ್ ನಿಜ ಜೀವನದಲ್ಲೂ ಒಂದಾದ ‘ಅಮೃತಧಾರೆ’ಯ ಮಲ್ಲಿ-ಜೈದೇವ್: ನಟಿ ರಾಧಾ ಭಗವತಿ ಹಾಗೂ ರಾಣವ್ ಗೌಡ ಅದ್ಧೂರಿ...

ನಿಜ ಜೀವನದಲ್ಲೂ ಒಂದಾದ ‘ಅಮೃತಧಾರೆ’ಯ ಮಲ್ಲಿ-ಜೈದೇವ್: ನಟಿ ರಾಧಾ ಭಗವತಿ ಹಾಗೂ ರಾಣವ್ ಗೌಡ ಅದ್ಧೂರಿ ವಿವಾಹ!

0
33

BBK13: ಕಿರುತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿರುವ ಮತ್ತೊಂದು ಜನಪ್ರಿಯ ಜೋಡಿ ಇದೀಗ ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಜೀ ಕನ್ನಡ ವಾಹಿನಿಯ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಗಳ ಮೂಲಕ ಮನೆಮಾತಾಗಿದ್ದ ನಟಿ ರಾಧಾ ಭಗವತಿ ಹಾಗೂ ನಟ ರಾಣವ್ ಗೌಡ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನವೆಂಬರ್ 25ರಂದು ಬೆಂಗಳೂರಿನಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕುಟುಂಬಸ್ಥರು ಹಾಗೂ ಕಿರುತೆರೆ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ನವೆಂಬರ್ 26ರಂದು ಬೆಳಗ್ಗೆ 8.45ರಿಂದ 9.45ರ ಶುಭ ಮುಹೂರ್ತದಲ್ಲಿ ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ವಿವಾಹ ಮಹೋತ್ಸವ ನಡೆಯುತ್ತಿದೆ.

ಕೂಲಿ ಕೆಲಸ ಮಾಡುತ್ತಾ ಕಷ್ಟದ ಹಾದಿಯಲ್ಲಿ ಸಾಗಿ ಬಂದ ರಾಣವ್ ಗೌಡ, ಜೂನಿಯರ್ ಆರ್ಟಿಸ್ಟ್ ಆಗಿ ವೃತ್ತಿ ಆರಂಭಿಸಿ ‘ಗಟ್ಟಿಮೇಳ’, ‘ಅಮೃತಧಾರೆ’ ಹಾಗೂ ನಾಯಕನಾಗಿ ‘ಶುಭಸ್ಯ ಶೀಘ್ರಂ’ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಇತ್ತ ‘ರಾಮಾಚಾರಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡ ರಾಧಾ ಭಗವತಿ, ‘ಅಮೃತಧಾರೆ’ಯ ಮಲ್ಲಿ ಪಾತ್ರ ಹಾಗೂ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯ ನಾಯಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

‘ಅಮೃತಧಾರೆ’ ಧಾರಾವಾಹಿಯ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಗಾಢ ಸ್ನೇಹ ಬೆಳೆದಿತ್ತು. ರಾಣವ್ ಅವರ ಸರಳ ವ್ಯಕ್ತಿತ್ವವನ್ನು ಮೆಚ್ಚಿದ ರಾಧಾ ಭಗವತಿ ಅವರೇ ಮೊದಲು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಇದೀಗ ಈ ಪ್ರೀತಿ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆಯ ಬಂಧನಕ್ಕೆ ಸಾಕ್ಷಿಯಾಗುತ್ತಿದೆ.