SK Home Ad
Home ಸುದ್ದಿ ನಿಮ್ಮ ಮೈಯಿಂದ ಕಟ್ಟ ವಾಸನೆ ಬರುತ್ತಿದೆ; ಆಕ್ಸ್‌ ಫರ್ಡ್‌ ನಲ್ಲಿ ಜನಾಂಗಿಯ ನಿಂದನೆಗೆ ಒಳಗಾದ ಭಾರತೀಯ...

ನಿಮ್ಮ ಮೈಯಿಂದ ಕಟ್ಟ ವಾಸನೆ ಬರುತ್ತಿದೆ; ಆಕ್ಸ್‌ ಫರ್ಡ್‌ ನಲ್ಲಿ ಜನಾಂಗಿಯ ನಿಂದನೆಗೆ ಒಳಗಾದ ಭಾರತೀಯ ವಿದ್ಯಾರ್ಥಿನಿ

0
3

 ಬ್ರಿಟನ್‌: ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬರು ಜನಾಂಗೀಯ ತಾರತಮ್ಯಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಶಾಪಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಬಳಿ ಬಂದು, ‘ನಿನ್ನಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆ’ ಎಂದು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.

ಈ ಘಟನೆಯಿಂದ ತೀವ್ರ ನೋವು ಮತ್ತು ಮುಜುಗರ ಅನುಭವಿಸಿದ್ದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪಿಎಚ್ ಡಿ ವ್ಯಾಸಂಗ್‌ ಮಾಡುತ್ತಿರುವ ಕಾಮಾಕ್ಷಿ ಎಂಬ ವಿದ್ಯಾರ್ಥಿನಿ ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋ ವನ್ನು ಹಾಕಿದ್ದಾರೆ. ಅದರಲ್ಲಿ ಅವರು ಅಂಗಡಿ ಒಂದರಲ್ಲಿ ಶಾಪಿಂಗ್‌ ಮಾಡುವಾಗ  ಅವರ ಸುತ್ತಲೂ ಬಿಳಿ ಮಹಿಳೆ ತಿರುಗಾಡುತ್ತಿದ್ದರು ಸ್ವಲ್ಪ ಸಮಯದ ಬಳಿಕ ಅವರು ಹತ್ತಿರ ಬಂದು ʼ ನಾನು ಹೇಳಬಾರದು ಅಂದುಕೊಂಡೆ ಆದರೆ ಹೇಳಲೆಬೇಕು ಎಂದು ಹೇಳುತ್ತಾ, ನಿಮ್ಮಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆ ಎಂದು ಅವಮಾನ ಮಾಡಿದರು, ನಾನು ಏನು  ಹೇಳಬೇಕು ಎಂದು ತಿಳಿಯದೆ ನಿಂತುಬಿಟ್ಟೆ ಎಂದು ಕಾಮಾಕ್ಷಿ ಹೇಳಿದರು.

ಮಹಿಳೆ ಮಾತು ಕೇಳಿ ನನಗೆ ಅಚ್ಚರಿಯಾಯಿತು ನಾನು ಕೆಟ್ಟ ವಾಸನೆ ಬರುವ ಹಾಗೆ ವಸ್ತುಗಳನ್ನು ಬಳಸಿರಲಿಲ್ಲ, ಬದಲಿಗೆ ಅಪ್ಪನಿಗೆ ಇಷ್ಟವಾದ ಪರ್ಫ್ಯೂಮ್‌ ಹಾಕಿದ್ದೆ ಎಂದು ತಮ್ಮ ವಿಡಿಯೋ ದಲ್ಲಿ ವಿವರಿಸಿದ್ದಾರೆ. ಆ ಮಹಿಳೆ ಅಲ್ಲಿಂದ  ಮಾತು ಮುಗಿಸಿ ತೆರಳಿದರು ನನಗೆ ಆ ಘಟನೆಯಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದು ನಿರಾಶೆಯನ್ನು ವ್ಯಕ್ತಪಡಿಸಿದರು.

ಈ ವಿಷಯದಿಂದ ನನಗೆ ತುಂಬಾ ನೋವಾಗಿದೆ ಹಾಗಾಗಿ ನಾನು ಮನೆಯಿಂದ ಹೊರಗಡೆ ಹೊಗಿಲ್ಲ ಯಾರ ಕಣ್ಣಿಗು ಬಿದ್ದಿಲ್ಲ.

ಇದು ಮೊದಲು ಸಾರಿ ಅಲ್ಲ ತಾವು ಬ್ರಿಟನ್‌ ನಲ್ಲಿ ಹಲವು ಬಾರಿ ಜನಾಂಗಿಯ ತಾರತಮ್ಯ ಎದುರಿಸಿದ್ದಾರೆ. ಕೆಲವೊಮ್ಮೆ ಬಿದಿಗಳಲ್ಲಿ ಇಂತಹ ವಿಚಾರಗಳು ಅನುಭವಿಸಿದರೆ, ಕೆಲವೊಮ್ಮೆ ಜನಾಂಗೀಯ ವಿಚಾರಗಳ ವೇದಿಕೆ  ಒದಗಿಸುವ ಸಂಸ್ಥೆಗಳು ಇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಾಂಗ ಸಾಮ್ರಾಜ್ಯಶಾಹಿ ಅಥವಾ ವಿವಾದಾತ್ಮಕ ಹಿನ್ನಲೆಯ ಆರೋಪಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಪ್ರತಿಷ್ಠಿತ ಸಂಸ್ಥೆಗಳನ್ನು ಹುಡುಕುವುದು ಕಷ್ಟ ಎಂದು ಅವರು ಅಬಿಪ್ರಾಯ ಪಟ್ಟಿದ್ದಾರೆ.