ಚಿಕ್ಕಮಗಳೂರು: ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಬಂದಿರುವ ಕಾಡಾನೆಗಳ ಹಿಂಡು ಇದೀಗ ಕಾಫಿನಾಡಿನ ರೈತರ ಬದುಕಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಮೂರು ಎಕರೆ ಭತ್ತದ ಗದ್ದೆಯನ್ನು ಸಂಪೂರ್ಣ ನಾಶಪಡಿಸಿರುವ ಘಟನೆ ನಡೆದಿದೆ.
ನಾಗಲಾಪುರದ ಸುಪ್ರಿತ್ ಎಂಬುವರಿಗೆ ಸೇರಿದ ತೋಟ ಹಾಗೂ ಭತ್ತದ ಗದ್ದೆಗೆ ನುಗ್ಗಿದ ಕಾಡಾನೆಗಳು ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿವೆ. ಫಸಲು ಕೈಗೆ ಬರುವ ಹಂತದಲ್ಲಿದ್ದ ಸಂದರ್ಭದಲ್ಲಿ ಆನೆಗಳು ದಾಳಿ ಮಾಡಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಈಗಾಗಲೇ ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಫಿ ತೋಟಗಳು ಹಾಗೂ ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಂಧಲೆ ನಡೆಸಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಾಫಿ ಗಿಡಗಳು ಹಾಗೂ ಭತ್ತದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಪ್ರಸ್ತುತ 39 ಕಾಡಾನೆಗಳ ಹಿಂಡು ನಾಲ್ಕು ತಂಡಗಳಾಗಿ ಬೇರ್ಪಟ್ಟು ವಿವಿಧೆಡೆ ಸಂಚರಿಸುತ್ತಿದ್ದು, ಆನೆಗಳು ಸಂಚರಿಸುತ್ತಿರುವ ಮಾರ್ಗದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರು ಭಯಭೀತರಾಗಿದ್ದಾರೆ. ಈ ಗದ್ದೆಯ ಸ್ಥಿತಿ ನೋಡಿದರೆ ರೈತನ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ ಎಂಬಂತಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಣ್ಣೆದುರೇ ಕಾಡಾನೆಗಳು ನಾಶಪಡಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಸರ್ಕಾರ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಕಾಡಾನೆಗಳ ದಾಂಧಲೆ: ಮೂರು ಎಕರೆ ಭತ್ತದ ಗದ್ದೆ ಸಂಪೂರ್ಣ ನಾಶಚಿಕ್ಕಮಗಳೂರು: ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಬಂದಿರುವ ಕಾಡಾನೆಗಳ ಹಿಂಡು ಇದೀಗ ಕಾಫಿನಾಡಿನ… Read more: ಕಾಡಾನೆಗಳ ದಾಂಧಲೆ: ಮೂರು ಎಕರೆ ಭತ್ತದ ಗದ್ದೆ ಸಂಪೂರ್ಣ ನಾಶ
- ನಮ್ಮ ರೈತರ ‘ಶ್ವೇತ ಕ್ರಾಂತಿ’ಯ ಶಕ್ತಿ: ವಿಶ್ವಕ್ಕೇ ಭಾರತ ನಂಬರ್ 1 ಆದ ರೋಚಕ ಪಯಣ! 🥛ನವೆಂಬರ್ 26ರಂದು ಭಾರತದ ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆ, ರೈತರ ಪರಿಶ್ರಮ ಮತ್ತು ಶ್ವೇತ… Read more: ನಮ್ಮ ರೈತರ ‘ಶ್ವೇತ ಕ್ರಾಂತಿ’ಯ ಶಕ್ತಿ: ವಿಶ್ವಕ್ಕೇ ಭಾರತ ನಂಬರ್ 1 ಆದ ರೋಚಕ ಪಯಣ! 🥛
- ಅಂಕಣ ಬರಹ | ಗ್ರಾಮಾಭಿವೃದ್ಧಿ ಬಿಲ್ವಿದ್ಯೆಯ ಕೈಚಳಕ ಆಗದಿರಲಿ!ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ ಹಳ್ಳಿ-ಗ್ರಾಮಗಳ… Read more: ಅಂಕಣ ಬರಹ | ಗ್ರಾಮಾಭಿವೃದ್ಧಿ ಬಿಲ್ವಿದ್ಯೆಯ ಕೈಚಳಕ ಆಗದಿರಲಿ!
- ನಂದಿನಿ ಮೊಸರು ಇನ್ಮುಂದೆ ಅಗ್ಗ: ಲೀಟರ್ಗೆ ₹2 ದರ ಕಡಿತಬೆಂಗಳೂರು: ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕೆಎಂಎಫ್ ಸಿಹಿಸುದ್ದಿ ನೀಡಿದೆ. ಮೊಸರಿನ ಮಾರಾಟ… Read more: ನಂದಿನಿ ಮೊಸರು ಇನ್ಮುಂದೆ ಅಗ್ಗ: ಲೀಟರ್ಗೆ ₹2 ದರ ಕಡಿತ
- ಸಚಿವರಾಗಬೇಕೆಂದಿದ್ದರೆ ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆಬೆಂಗಳೂರು: ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ವಿಚಾರ ಕಾಂಗ್ರೆಸ್ನಲ್ಲಿ ಅಸಮಾಧಾನಕ್ಕೆ… Read more: ಸಚಿವರಾಗಬೇಕೆಂದಿದ್ದರೆ ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆ
- ವಿದ್ಯುತ್ ಪೂರೈಕೆಗೆ ಹೆಸ್ಕಾಂ ಬೃಹತ್ ಸಿದ್ಧತೆಹುಬ್ಬಳ್ಳಿ: ಗ್ರಾಹಕರಿಗೆ ಹಾಗೂ ರೈತರಿಗೆ ಸಮರ್ಪಕ, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸುವ… Read more: ವಿದ್ಯುತ್ ಪೂರೈಕೆಗೆ ಹೆಸ್ಕಾಂ ಬೃಹತ್ ಸಿದ್ಧತೆ




























