SK Home Ad
Home ಸಿನಿ ಮಿಲ್ಸ್ ಟಾಸ್ಕ್ ಮಾಸ್ಟರ್ ಧನುಷ್ ಮಂಜುನಾಥ್: ಸಿಕ್ಕ ಅವಕಾಶ ಬಳಸಿಕೊಂಡು ‘ಜೋಕರ್ ಕಾರ್ಡ್’ ಗೆದ್ದು ಬೀಗಿದರು!

ಟಾಸ್ಕ್ ಮಾಸ್ಟರ್ ಧನುಷ್ ಮಂಜುನಾಥ್: ಸಿಕ್ಕ ಅವಕಾಶ ಬಳಸಿಕೊಂಡು ‘ಜೋಕರ್ ಕಾರ್ಡ್’ ಗೆದ್ದು ಬೀಗಿದರು!

0
6

BBK13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ದಿನದಿಂದ ದಿನಕ್ಕೆ ರೋಚಕ ತಿರುವುಗಳು ಎದುರಾಗುತ್ತಿದ್ದು, ಇದೀಗ ‘ಜೋಕರ್ ಕಾರ್ಡ್’ ಪಡೆಯಲು ನಡೆದ ಟಾಸ್ಕ್ ಮನೆಯ ಲೆಕ್ಕಾಚಾರವನ್ನೇ ಬದಲಿಸಿದೆ. ಈ ಆಟದಲ್ಲಿ ಮಿಂಚಿನ ವೇಗದಲ್ಲಿ ಪ್ರದರ್ಶನ ನೀಡಿದ ಧನುಷ್ ಮಂಜುನಾಥ್, ತಾವು ಮತ್ತೊಮ್ಮೆ ಮನೆಯ ನಿಜವಾದ ‘ಟಾಸ್ಕ್ ಮಾಸ್ಟರ್’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸದ್ಯ ಧನುಷ್ ಚುರುಕುತನದ ಆಟಕ್ಕೆ ವೀಕ್ಷಕರ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೀಸನ್ ಅಂತ್ಯದವರೆಗೂ ನಾಮಿನೇಟ್ ಆಗಿರುವ ಯಶಸ್ ಕೃಷ್ಣ ಅವರಿಗೆ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಆಡುವ ಅವಕಾಶವಿರಲಿಲ್ಲ. ಮನೆಯ ಸದಸ್ಯರು ಒಮ್ಮತದಿಂದ ನಾಲ್ವರನ್ನು ಆಯ್ಕೆ ಮಾಡಲು ವಿಫಲವಾದ ಕಾರಣ, ಬಿಗ್ ಬಾಸ್ ಆ ವಿಶೇಷ ಅಧಿಕಾರವನ್ನು ಯಶಸ್ ಅವರಿಗೇ ನೀಡಿದ್ದರು. ಅದರಂತೆ ಯಶಸ್ ಅವರು ಸೌಂದರ್ಯಾ ಶೆಟ್ಟಿ, ಆಸಿಯಾ ಫಿರ್ದೋಸ್, ಜಗ್ಗ ಮಮ್ಮಿ ಹಾಗೂ ಕಿರಣ್ ಶಾಸ್ತ್ರಿ ಅವರನ್ನು ಕಣಕ್ಕಿಳಿಸಿದ್ದು, ಧನುಷ್ ಅವರನ್ನು ಕೈಬಿಟ್ಟಿದ್ದರು.

ಆದ್ರೆ ಟಾಸ್ಕ್ ನಡುವೆ ಕಿರಣ್ ಶಾಸ್ತ್ರಿ ನಿರ್ಲಕ್ಷ್ಯ ತೋರಿದ್ದರಿಂದ ಅಸಮಾಧಾನಗೊಂಡ ಬಿಗ್ ಬಾಸ್, ಅವರನ್ನು ಆಟದಿಂದ ಹೊರಗಿಟ್ಟು ಬದಲಿ ಸ್ಪರ್ಧಿಯನ್ನು ಕಳುಹಿಸಲು ಸೂಚಿಸಿದರು. ಈ ವೇಳೆ ಕ್ಯಾಪ್ಟನ್ ಗಾನವಿ ಗೌಡ ಮತ್ತು ಗಗನ್ ಚಿನ್ನಪ್ಪ ಒಮ್ಮತದಿಂದ ಧನುಷ್ ಮಂಜುನಾಥ್ ಅವರನ್ನು ಆಯ್ಕೆ ಮಾಡಿದರು. ಅನಿರೀಕ್ಷಿತವಾಗಿ ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಧನುಷ್, ಅಖಾಡಕ್ಕಿಳಿದ ಕ್ಷಣದಿಂದಲೇ ಸಖತ್ ವೇಗವಾಗಿ ಆಡಿ ಜೋಕರ್ ಕಾರ್ಡ್ ಗೆದ್ದುಕೊಂಡರು. ಮೊದಲ ಹಂತದಲ್ಲಿ ಅವಕಾಶ ವಂಚಿತರಾದರೂ, ಬದಲಿ ಆಟಗಾರನಾಗಿ ಬಂದು ಗೆದ್ದ ಧನುಷ್ ಆಟಕ್ಕೆ ಮನೆಯವರೇ ದಂಗಾಗಿದ್ದಾರೆ.