ಧಾರ್ಮಿಕ ನಂಬಿಕೆ ಎಂಬುದು ಮನುಷ್ಯರಿಗೆ ಮೂಢನಂಬಿಕೆ ಅಥವಾ ಅತಿನಂಬಿಕೆ ಕಡೆಗೆ ಸೆಳೆಯುತ್ತದೆ ಮಧ್ಯಪ್ರದೇಶದ ಅಮರಕಂಟಕನಲ್ಲಿರುವ ನರ್ಮದಾ ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿ ಸಾಂಪ್ರದಾಯಿಕ ಆಚರಣೆ ಮಾಡುವಾಗ ಆನೆಯ ಪ್ರತಿಮೆಯ ಕಾಲುಗಳ ನಡುವೆ ಸಿಲುಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮರಕಂಟಕ್ ನಲ್ಲಿರುವ ನರ್ಮದಾ ದೇವಸ್ಥಾನದಲ್ಲಿ ಕಪ್ಪು ಕಲ್ಲಿನ ಆನೆಯ ಪ್ರತಿಮೆಯನ್ನು ಸ್ಥಾಪಿಸಿದ್ದು, ದೇವಾಲಯದ ಸಂಪ್ರದಾಯಗಳ ಪ್ರಕಾರ ಆನೆಯ ಪ್ರತಿಮೆಯ ಕಾಲುಗಳ ನಡುವಿನ ಅಂತರವನ್ನು ಸುಲಭವಾಗಿ ಯಶಸ್ವಿಯಾಗಿ ದಾಟಿದವರ ಇಚ್ಛೆಗಳು ಈಡೇರುತ್ತವೆ. ಕೆಲವು ಭಕ್ತರು ಈ ಆಚರಣೆಯನ್ನು ಒಬ್ಬರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪರೀಕ್ಷೆ ಎಂದು ಪರಿಗಣಿಸುತ್ತಾರೆ.
ಸಂಪ್ರದಾಯದಂತೆ, ಆ ವ್ಯಕ್ತಿ ಆನೆಯ ಪ್ರತಿಮೆಯ ಕೆಳಗಿರುವ ಕಿರಿದಾದ ತೆರೆಯುವಿಕೆಯ ಮೂಲಕ ತೆವಳಲು ಪ್ರಯತ್ನಿಸಿದರು. ಆದರೆ, ದಾರಿ ಮಧ್ಯದಲ್ಲಿ ಸಿಲುಕಿಕೊಂಡು ತನ್ನನ್ನು ತಾನು ಬಿಡಿಸಿಕೊಳ್ಳಲು ಹೆಣಗಾಡಿ ಇತರ ಭಕ್ತರ ಗಮನ ಸೆಳೆದರು.
ಆ ವ್ಯಕ್ತಿಗೆ ಸಹಾಯ ಮಾಡಲು ಹಲವಾರು ಭಕ್ತರು ಪ್ರತಿಮೆಯ ಸುತ್ತಲೂ ಜಮಾಯಿಸಿದರು,
ಕೆಲವರು ಧಾರ್ಮಿಕ ಘೋಷಣೆಗಳನ್ನು ಕೂಗಿದರೆ, ಇನ್ನು ಕೆಲವರು ಕಿರಿದಾದ ಜಾಗದಿಂದ ಅವನನ್ನು ಹೊರಗೆಳೆಯಲು ಪದೇ ಪದೇ ಪ್ರಯತ್ನಿಸಿದರು.




















