SK Home Ad
Home ನಮ್ಮ ಜಿಲ್ಲೆ ಬಸವ ಮಂಟಪ ಲೇಖಕ ಕ್ಷಮೆ ಕೇಳಿ, ಪುಸ್ತಕ ವಾಪಸ್ ಪಡೆಯಲಿ

ಬಸವ ಮಂಟಪ ಲೇಖಕ ಕ್ಷಮೆ ಕೇಳಿ, ಪುಸ್ತಕ ವಾಪಸ್ ಪಡೆಯಲಿ

0
27

ಬೆಂಗಳೂರು: ಬಸವಣ್ಣ ಅವರು ಮಹಾನ್ ಮಾನವತಾವಾದಿಯಾಗಿದ್ದು ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ವಿಶ್ವ ಮಾನವರಾಗಿದ್ದು, ಅವರ ವಿಚಾರಗಳನ್ನು ಎಲ್ಲರೂ ಗೌರವಿಸುತ್ತಾರೆ. ಬಸವ ಮಂಟಪ ಲೇಖಕ ರವಿ ಹಂಜ್ ಸಂಶೋಧನೆಯ ಹೆಸರಲ್ಲಿ ಪೂರ್ವಾಗ್ರಹ ಪೀಡಿತರಾಗಿ ಬರೆದಿದ್ದು ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಮತ್ತು ಪುಸ್ತಕವನ್ನು ವಾಪಸ್ ಪಡೆಯಬೇಕು. ಸರ್ಕಾರ ಲೇಖಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಪುಸ್ತಕದ ಹೆಸರು ಬಸವ ಮಂಟಪ ಅಂತ ಇದ್ದರೂ ಅವರು ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಇಡಿ ಮನುಕುಲಕ್ಕೆ ಅವಮಾನ ಮಾಡಿದಂತೆ. ಲೇಖಕರು ಸಂಶೋಧನೆಯ ಹೆಸರಲ್ಲಿ ಪೂರ್ವಾಗ್ರಹ ಪೀಡಿತರಾಗಿ ಬರೆದಿದ್ದು ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಮತ್ತು ಪುಸ್ತಕವನ್ನು ವಾಪಸ್ ಪಡೆಯಬೇಕು. ಸರ್ಕಾರ ಲೇಖಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.