SK Home Ad
Home ಸುದ್ದಿ ಆರ್ಡರ್‌ ಕಾಪಿ ಕೊಡೊವರೆಗೂ ಥರಣಿ ನಿಲ್ಲಲ್ಲ; ಮೂರನೆ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ  

ಆರ್ಡರ್‌ ಕಾಪಿ ಕೊಡೊವರೆಗೂ ಥರಣಿ ನಿಲ್ಲಲ್ಲ; ಮೂರನೆ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ  

0
9

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ  ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ ನ ರಸ್ತೆಬದಿಯಲ್ಲಿ ರಾತ್ರಿಯಿಡಿ ಚಳಿಯಲ್ಲಿ  ಮತ್ತು ಬೆಳಗಿನ ಜಾವ ಶೌಚಾಲಯದ ತೊಂದರೆ ಅನುಭವಿಸಿ ಕಾರ್ಯಕರ್ತೆಯರು ಪಟ್ಟು ಬಿಡದೆ  ಪ್ರತಿಭಟನೆ ಮಂದುವರೆಸಿದ್ದಾರೆ.

ಆರೋಗ್ಯ ಸಚಿವ ಯು.ಟಿ.ಖಾದರ್‌ ಬಂದು ನಮಗೆ ಸರ್ಕಾರದ ಕಡೆಯಿಂದ ಯಾವುದೇ ಭರವಸೆ ನೀಡಿಲ್ಲ, ಹಾಗಾಗಿ ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಸರ್ಕಾರ ಆರ್ಡರ್ ಕಾಪಿ ಕೊಡುವರೆಗೆ ನಾವು ಹೊಗುವುದಿಲ್ಲ ಎಂದು ತಮ್ಮ ಅಳಿಲು ತೊಡಿಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡುತ್ತಿದ್ದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.  

 17 ವರ್ಷದಿಂದ ಸಮಜ ಸೇವೆ ಎಂದು ಭಾವಿಸಿ ಕೆಲಸ ಮಾಡಿದಿವಿ ಆದರೆ ಇದಿಗ ಬೇಡಿಕೆಗಳ ಕುರಿತು ಅಧಿಕೃತ ಲಿಖಿತ ಆದೇಶ ನೀಡುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಚೆರ್ಚೆ ಮಾಡಬಹುದಾ ಎಂಬುದು ಕುತುಹಲ ಇದೆ ಮತ್ತು  ಸರ್ಕಾರದ ಮುಂದಿನ ನಿರ್ಧಾರದತ್ತ ಕಾರ್ಯಕರ್ತೆಯರು ಎದುರು ನೋಡುತ್ತಿದ್ದಾರೆ.