SK Home Ad
Home ಸುದ್ದಿ ರಾಜ್ಯ ವರ್ಷದ ಆರಂಭದಲ್ಲಿಯೇ ಚುನಾವಣೆ ಫಿಕ್ಸ್‌

ವರ್ಷದ ಆರಂಭದಲ್ಲಿಯೇ ಚುನಾವಣೆ ಫಿಕ್ಸ್‌

0
1

ಮೈಸೂರು: ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಮೈಸೂರಿನಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ನಡೆಸಲು ಈಗಾಗಲೇ ಎಲ್ಲಾ ತಯಾರಿಗಳು ನಡೆದಿದೆ. ಸರ್ಕಾರ ಕೂಡ ಚುನಾವಣೆ ನಡೆಸಲೇಬೇಕೆಂದು ತೀರ್ಮಾನಿಸಿದೆ. ಚುನಾವಣಾ ಆಯೋಗ ಕೂಡ ಸಿದ್ದತೆಗಳನ್ನು ಆರಂಭಿಸಿದೆ ಎಂದರು.

ಬಸ್ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ: ಕೇಂದ್ರ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು ಏರಿಸಿರುವ ಕಾರಣ ಇಲ್ಲಿ ಎಲ್ಲಾ ಬೆಲೆಯನ್ನು ಏರಿಸಬೇಕಾದ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ತನ್ನ ಇತಿ ಮಿತಿಯಲ್ಲೇ ಎಲ್ಲದನ್ನು ನಿಯಂತ್ರಣ ಮಾಡುತ್ತಿದೆ.

ಬೆಲೆ ಏರಿಕೆ ಅನಿವಾರ್ಯ: ಹಾಲಿನ ದರ ಹೆಚ್ಚಳ ಮಾಡಿದ್ದೇವೆ. ಆ ದುಡ್ಡು ಸರ್ಕಾರಕ್ಕೆ ಬರುವುದಿಲ್ಲ. ಅದನ್ನು ರೈತರಿಗೆ ಕೊಡುತ್ತೇವೆ. ನಮ್ಮ ಸರ್ಕಾರ ಮತ್ತು ಸರ್ಕಾರದ ಖಜಾನೆ ಎರಡು ಗಟ್ಟಿಯಾಗಿದೆ. ಹಣಕಾಸಿನ ತೊಂದರೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.