SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಸುಹಾಸ್ ಹೆಚ್ಚು ಮತಗಳಿಂದ ಗೆಲ್ಲಲಿ: ಡಿಕೆಶಿ

ಸುಹಾಸ್ ಹೆಚ್ಚು ಮತಗಳಿಂದ ಗೆಲ್ಲಲಿ: ಡಿಕೆಶಿ

0
69

ಹಿರಿಯೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ದಿಂಡಾವರ ಗ್ರಾಮದಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನೆ ಬಳಿಕ ಮಾತನಾಡಿದ ಸಿಎಂ, ಹಿಂದೆ ನೀವು ಪೂರ್ಣಿಮಾ ಹಾಗೂ ಡಿ.ಸುಧಾಕರ್ ರನ್ನು ಗೆಲ್ಲಿಸಿದ್ದೀರಿ. ಇಂದು ಸುಧಾಕರ್ ಇಲ್ಲ, ಆದರೆ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಪೂರ್ಣಿಮಾ ಇಂದು ನಮ್ಮೊಂದಿಗೆ ಇದ್ದಾರೆ. ಇಂದು ನನ್ನ ಗೆಳೆಯ ಸುಧಾಕರ್ ಇದ್ದಿದ್ದರೆ ಸಂಭ್ರಮದಿಂದ ಆಚರಣೆ ಮಾಡಬಹುದಿತ್ತು ಎಂದು ಭಾವುಕರಾದರು.

ಇದೇ ವೇಳೆ ಮಾತಿನ ಭರದಲ್ಲಿ ಸುಹಾಸ್ ಸುಧಾಕರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದರೇ ಎಂಬ ಚರ್ಚೆಗೆ ಸಿಎಂ ಮಾತು ಕಾರಣವಾಯಿತು. ನೀವು ಸುಹಾಸ್ ಸುಧಾಕರ್ ರನ್ನು ಅತೀ ಹೆಚ್ಚು ಮತ ಕೊಟ್ಟು ಆಯ್ಕೆ ಮಾಡುತ್ತೀರಿ. ಸುಧಾಕರ್‌ಗಿಂತ ಹೆಚ್ಚು ಮತ ಸುಹಾಸ್‌ಗೆ ಕೊಡಬೇಕು. ನಮಗೆ ಓಟು ಗ್ಯಾರಂಟಿ ತಾನೇ? ಎಂದು ಜನರನ್ನು ಕೇಳಿದರು.

ಜನರು ಸುಹಾಸ್ ಸುಧಾಕರ್‌ಗೆ ಟಿಕೆಟ್ ನೀಡಿ ಎಂದು ಕೂಗಿದಾಗ, ಸಿಎಂ ಚಟಾಕಿ ಹಾರಿಸಿದರು. ನಾವೇ ಮದುವೆ ಗಂಡು ರೆಡಿ ಮಾಡಿಕೊಂಡಿದ್ದೇವೆ, ಇನ್ನೂ ಬೇರೆ ಗಂಡು ಯಾಕೆ ಹುಡುಕುತ್ತೀರಿ? ನಿಮ್ಮ ಕ್ಯಾಂಡಿಡೇಟೇ ನನ್ನ ಕ್ಯಾಂಡಿಡೇಟ್ ಎಂದು ಹೇಳಿ ಸುಧಾಕರ್ ಹೆಸರು ಕೂಗಿದ ಜನರಿಗೆ ಪ್ರತಿಕ್ರಿಯಿಸಿದರು.

ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಆರ್.ಅಶೋಕ್, ಹೆಚ್.ಡಿ.ಕುಮಾರಸ್ವಾಮಿ ನೀರು ಕೊಡುವ ಒಂದೇ ಒಂದು ಕೆಲಸ ಮಾಡಿಲ್ಲ. ನಾಳೆ ಬಂದು ನಿಮಗೆಲ್ಲ ಆಕಾಶ ತೋರಿಸುತ್ತಾರೆ. ಕಿವಿಗೆ ಇಂಪಾಗಿ ಮಾತನಾಡುತ್ತಾರೆ, ಸುಳ್ಳು ಅವರ ಮನೆ ದೇವರು ಎಂದು ಕಿಡಿಕಾರಿದರು.