Home Advertisement
Home ನಮ್ಮ ಜಿಲ್ಲೆ ಬಿಜೆಪಿ ಅಭಿವೃದ್ಧಿ ಪರ್ವ ರಾಜ್ಯದೆಲ್ಲೆಡೆಯಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಬಿಜೆಪಿ ಅಭಿವೃದ್ಧಿ ಪರ್ವ ರಾಜ್ಯದೆಲ್ಲೆಡೆಯಿದೆ: ಮುಖ್ಯಮಂತ್ರಿ ಬೊಮ್ಮಾಯಿ

0
154
cm

ರಬಕವಿ-ಬನಹಟ್ಟಿ: ಅಭಿವೃದ್ಧಿ ಪರ್ವ ಎಲ್ಲೆಡೆಯಿದೆ. ಕೃಷಿ, ನೀರಾವರಿ, ಸಾಮಾಜಿಕ ಸೇರಿದಂತೆ ಎಲ್ಲ ವರ್ಗದ ಜನತೆಗೆ ಅಭಿವೃದ್ಧಿಯಾಗಿ ಜನತೆ ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಗೆ ಆಗಮಿಸುತ್ತಿದ್ದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಪಕ್ಷವಾದ ಕಾಂಗ್ರೆಸ್ ಆಧಾರ ರಹಿತ ಆರೋಪಗಳಿಗೆ ಉತ್ತರ ಕೊಡಲ್ಲ. ಬಿಜೆಪಿಗೆ ಜನತೆಯ ಆಶೀರ್ವಾದವಿದೆ ಎಂದರು.
ಆಡಳಿತಕ್ಕೆ ಬಾರದ ಕಾಂಗ್ರೆಸ್ ಪಕ್ಷದಿಂದ ಡಿಕೆ ಶಿವಕುಮಾರ್ ಹಾಗು ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗುತ್ತೇನೆಂದು ನಡೆಸುತ್ತಿರುವ ಪೈಪೋಟಿ ವಿನಾಕಾರಣವೆಂದು ಬೊಮ್ಮಾಯಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪ್ರತಿ ಸಲ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಹಾಗು ಗೃಹ ಮಂತ್ರಿ ಅಮಿತ್ ಶಾ ಅವರು ರಾಜ್ಯಕ್ಕೆ ಬರುವಾಗ ಸಾವಿರಾರು ಕೋಟಿ ರೂ.ಗಳ ಅನುದಾನ ಗಳನ್ನು ಹೊತ್ತು ತಂದಿದ್ದಾರೆ ವಿನಃ ಖಾಲಿ ಕೈಗಳಿಂದ ಭಾಷಣ ಮಾಡಿಲ್ಲವೆಂದು ಬೊಮ್ಮಾಯಿ ಪ್ರತಿ ಪಕ್ಷಗಳ ವಾದಕ್ಕೆ ಪ್ರತಿವಾದಿಸಿದರು. ಬಾಗಲಕೋಟೆ ಜಿಲ್ಲೆಗೆ ಮುಂದಿನ ವಾರ ಮತ್ತೇ ಬರುವೆ, ಮುಧೋಳ, ಹುನಗುಂದ, ಬಾಗಲಕೋಟೆ ಸೇರಿ ಅನೇಕ ಕಡೆಗಳಲ್ಲಿ ಬರುವೆ. ಜಿಲ್ಲೆಯಲ್ಲಿ ಬಿಜೆಪಿ ಭರವಸೆ ಹೆಚ್ಚಿದ್ದು, ಜನತೆಯಿಟ್ಡಿರುವ ವಿಶ್ವಾಸ ಖುಷಿ ತಂದಿದೆ ಎಂದರು.