SK Home Ad
Home ಕ್ರೀಡೆ WPL 2027: 2 ಗಂಟೆ ಮೌನದ ಬಳಿಕ ಆರ್‌ಸಿಬಿ ಖಾತೆ ಓಪನ್; 15ರ ಬಾಲಕಿಗೆ ಬಲೆಬೀಸಿದ...

WPL 2027: 2 ಗಂಟೆ ಮೌನದ ಬಳಿಕ ಆರ್‌ಸಿಬಿ ಖಾತೆ ಓಪನ್; 15ರ ಬಾಲಕಿಗೆ ಬಲೆಬೀಸಿದ ಡೆಲ್ಲಿ, ಕೊಚ್ಚಿಯಲ್ಲಿ ಜಾಕ್‌ಪಾಟ್ ಹೊಡೆದಿದ್ದು ಯಾರು?

0
21

WPL 2027: ಕೊಚ್ಚಿಯಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಮಿನಿ ಹರಾಜು ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದು, ಬರೋಬ್ಬರಿ 2 ಗಂಟೆಗಳ ಕಾಲ ಸುಮ್ಮನಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೊನೆಗೂ ತನ್ನ ಮೊದಲ ಖರೀದಿಯೊಂದಿಗೆ ಮೌನ ಮುರಿದಿದೆ. ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಜೆಸ್ ಜೊನಾಸೆನ್ ಅವರನ್ನು ರೂ. 40 ಲಕ್ಷ ಮೂಲಬೆಲೆಗೆ ಆರ್‌ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಈ ಬಾರಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕಿ ಹಾಗೂ ಸ್ಪಿನ್ನರ್ ಸೋಫಿ ಮೊಲಿನೆಕ್ಸ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದಾರೆ. ಆರ್‌ಸಿಬಿ ಜೊತೆಗಿನ ತೀವ್ರ ಪೈಪೋಟಿಯ ಬಳಿಕ ಯುಪಿ ವಾರಿಯರ್ಸ್ ಬರೋಬ್ಬರಿ ರೂ.1.1 ಕೋಟಿಗೆ ಅವರನ್ನು ಖರೀದಿಸಿ ಜಾಕ್‌ಪಾಟ್ ಹೊಡೆದಿದೆ.

ಇನ್ನೊಂದೆಡೆ ಭಾರತದ ಸ್ಪೋಟಕ ಬ್ಯಾಟರ್ ಕಿರಣ್ ನವಗಿರೆ ಅವರನ್ನು ಮುಂಬೈ ವಿರುದ್ಧ ಸೆಣಸಿ ಜೆಮಿಮಾ ರೋಡ್ರಿಗಸ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ರೂ.75 ಲಕ್ಷಕ್ಕೆ ತನ್ನದಾಗಿಸಿಕೊಂಡಿದೆ. ಅಲ್ಲದೆ, ಹರಾಜಿನ ಅತಿ ಕಿರಿಯ ಪ್ರತಿಭೆ, ಕೇವಲ 15 ವರ್ಷದ ಭಾರತೀಯ ಆಲ್‌ರೌಂಡರ್ ಉಮಾ ಕಾಶ್ವಿ ಹಾಗೂ ಸ್ಕಾಟ್ಲೆಂಡ್ ಬೌಲರ್ ಕಿರ್ಸ್ಟಿ ಗಾರ್ಡನ್ ಅವರನ್ನು ಡೆಲ್ಲಿ ತಲಾ ರೂ.10 ಲಕ್ಷಕ್ಕೆ ಖರೀದಿಸಿ ಅಚ್ಚರಿ ಮೂಡಿಸಿದೆ.

ಯುಪಿ ವಾರಿಯರ್ಸ್ ತಂಡ ಸ್ನೇಹ್ ರಾಣಾ, ಗ್ರೇಸ್ ಹ್ಯಾರಿಸ್ ಮತ್ತು ಸುಷ್ಮಾ ವರ್ಮಾ ಅವರನ್ನು ಖರೀದಿಸಿ ತನ್ನ ಬಲ ಹೆಚ್ಚಿಸಿಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಯುವ ಆಟಗಾರ್ತಿಯರಾದ ದೀಶಾ ಕಾಸಟ್, ಲತಿಕಾ ಇನಾಮ್ದಾರ್, ಭಾರ್ತಿ ರಾವಲ್ ಹಾಗೂ ಸಾನಿಕಾ ಚಾಲ್ಕೆ ಅವರನ್ನು ತಲಾ ರೂ.10 ಲಕ್ಷ ಮೂಲಬೆಲೆಗೆ ಖರೀದಿ ಮಾಡಿದೆ.

ವಿಶ್ವಕಪ್ ವಿಜೇತ ಉಮಾ ಛೇತ್ರಿ, ತಾನಿಯಾ ಭಾಟಿಯಾ ಮತ್ತು ಚಾಮರಿ ಅಟಪಟ್ಟು ಅವರಂತಹ ಸ್ಟಾರ್ ಆಟಗಾರ್ತಿಯರು ಮೊದಲ ಹಂತದಲ್ಲಿ ಅನ್‌ಸೋಲ್ಡ್ ಆಗಿ ಶಾಕ್ ನೀಡಿದ್ದಾರೆ. ಸದ್ಯ ಮೊದಲ ಅಕ್ಸಲರೇಟೆಡ್ ಹಂತ ಮುಕ್ತಾಯಗೊಂಡಿದ್ದು, ಉಳಿದಿರುವ 9 ಸ್ಲಾಟ್‌ಗಳ ಭರ್ತಿಗೆ ಕದನ ಮುಂದುವರಿದಿದೆ.