SK Home Ad
Home ಸುದ್ದಿ ರಾಜ್ಯ ವಿಧಾನಪರಿಷತ್ ಚುನಾವಣೆ ಫಲಿತಾಂಶ 2026 LIVE: ನಾಲ್ಕು ಕ್ಷೇತ್ರಗಳ ಮತ ಎಣಿಕೆ, ಕ್ಷಣಕ್ಷಣದ ಮಾಹಿತಿ

ವಿಧಾನಪರಿಷತ್ ಚುನಾವಣೆ ಫಲಿತಾಂಶ 2026 LIVE: ನಾಲ್ಕು ಕ್ಷೇತ್ರಗಳ ಮತ ಎಣಿಕೆ, ಕ್ಷಣಕ್ಷಣದ ಮಾಹಿತಿ

0
219
ಶಿಕ್ಷಕರ, ಪದವೀಧರರ ಕ್ಷೇತ್ರಗಳ ಮತ ಎಣಿಕೆ ಆರಂಭ: ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ವಿಧಾನಪರಿಷತ್ ಚುನಾವಣೆ ಫಲಿತಾಂಶ: ಕರ್ನಾಟಕ MLC ಫಲಿತಾಂಶ LIVE: ಶಿಕ್ಷಕರ, ಪದವೀಧರರ ಕ್ಷೇತ್ರಗಳ ಎಣಿಕೆ ಅಪ್‌ಡೇಟ್

ಹುಬ್ಬಳ್ಳಿ: ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು (ಅಕ್ಟೋಬರ್ 27) ಆರಂಭವಾಗಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಪದವೀಧರರ ಎರಡು ಹಾಗೂ ಶಿಕ್ಷಕರ ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ನಡೆದಿತ್ತು. ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಫಲಿತಾಂಶದ ಕುರಿತು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಬ್ಯಾಲೆಟ್ ಪತ್ರಗಳ ಬಂಡಲ್ ಮಾಡುವ ಕಾರ್ಯ : ಪರಿಷತ್ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬ್ಯಾಲೆಟ್ ಪತ್ರಗಳ ಬಂಡಲ್ ಮಾಡುವ ಕಾರ್ಯ ಆರಂಭಗೊಂಡಿದೆ. ಇದಾದ ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ 43 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ.

ಯಾವ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ?

🔷 ದಕ್ಷಿಣ-ಪೂರ್ವ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಶಶಿ ಹುಲಿಕುಂಟೆ ಮಠ್ ಮತ್ತು ಬಿಜೆಪಿಯ ಕೆ.ಎಂ. ಸುರೇಶ್ ನಡುವೆ ಸ್ಪರ್ಧೆ.

🔷 ಪಶ್ಚಿಮ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ ಹಾಗೂ ಬಿಜೆಪಿಯ ಹಾಲಿ ಸದಸ್ಯ ಎಸ್.ವಿ. ಸಂಕನೂರು ಕಣದಲ್ಲಿದ್ದಾರೆ.

🔷 ಈಶಾನ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಮತ್ತು ಬಿಜೆಪಿಯ ಹಾಲಿ ಸದಸ್ಯ ಶಶೀಲ್ ಜಿ. ನಮೋಶಿ ನಡುವೆ ಪೈಪೋಟಿ.

🔷 ಬೆಂಗಳೂರು ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪುಟ್ಟಣ್ಣ ಹಾಗೂ ಜೆಡಿಎಸ್‌ನ ಎ.ಪಿ. ರಂಗನಾಥ್ ನಡುವೆ ಸ್ಪರ್ಧೆ.

ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ

ಅಕ್ಟೋಬರ್ 23ರಂದು ನಡೆದ ಮತದಾನದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರವು ಅತ್ಯಧಿಕ ಮತದಾನ ದಾಖಲಿಸಿದೆ.

ಕ್ಷೇತ್ರಮತದಾನದ ಪ್ರಮಾಣ
ದಕ್ಷಿಣ-ಪೂರ್ವ ಪದವೀಧರರ ಕ್ಷೇತ್ರಶೇ. 73.58
ಪಶ್ಚಿಮ ಪದವೀಧರರ ಕ್ಷೇತ್ರಶೇ. 75.62
ಈಶಾನ್ಯ ಶಿಕ್ಷಕರ ಕ್ಷೇತ್ರಶೇ. 86.97
ಬೆಂಗಳೂರು ಶಿಕ್ಷಕರ ಕ್ಷೇತ್ರಶೇ. 81.98

ಫಲಿತಾಂಶದ ಮೇಲೆ ರಾಜಕೀಯ ವಲಯದ ಕಣ್ಣು

ಬಿಜೆಪಿ ಈಗಾಗಲೇ ನಾಲ್ಕರಲ್ಲಿ ಮೂರು ಕ್ಷೇತ್ರಗಳನ್ನು ಹೊಂದಿದ್ದು, ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜೆಡಿಎಸ್ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮರಳಿ ಪಡೆಯುವ ಗುರಿ ಹೊಂದಿದೆ. ಮತ್ತೊಂದೆಡೆ, ಕಾಂಗ್ರೆಸ್ ತನ್ನ ಪ್ರಸ್ತುತ ಸ್ಥಾನವನ್ನು ಉಳಿಸಿಕೊಂಡು ಇತರ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಿದೆ. ಈ ಫಲಿತಾಂಶವು ಪದವೀಧರರು ಮತ್ತು ಶಿಕ್ಷಕರ ವಲಯದಲ್ಲಿ ಪಕ್ಷಗಳ ಬೆಂಬಲದ ಸ್ಥಿತಿಯನ್ನು ತಿಳಿಸುವುದರ ಜತೆಗೆ, ಬಿಜೆಪಿ–ಜೆಡಿಎಸ್ ಮೈತ್ರಿಯ ಸಮನ್ವಯಕ್ಕೂ ಒಂದು ಸೂಚಕವಾಗಲಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.