SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ಬೆದರಿ ಆತಂಕ!

ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ಬೆದರಿ ಆತಂಕ!

0
96

ಶಿವಮೊಗ್ಗ: ನಗರದ ವಿಜಯದಶಮಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಬುಧವಾರ ಅನಿರೀಕ್ಷಿತ ಘಟನೆ ಸಂಭವಿಸಿದ್ದು, ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ದಿಢೀರನೆ ಬೆದರಿ ನಿಯಂತ್ರಣ ತಪ್ಪಿದ ಪರಿಣಾಮ ಮೆರವಣಿಗೆಗೆ ಅಡ್ಡಿಯಾಯಿತು. ಇದರಿಂದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ ಈ ಬಾರಿ ಮೊದಲ ಬಾರಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ಅಂಬಾರಿಯನ್ನು ಹೊರುವ ಜವಾಬ್ದಾರಿ ಪಡೆದಿತ್ತು. ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಆನೆ ದಿಢೀರನೆ ಗಾಬರಿಗೊಂಡು ಓಡಿದಾಗ ಅಂಬಾರಿ ಓರಗಿಕೊಂಡು ಕೆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.

ಜನರಲ್ಲಿ ಆತಂಕ – ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ : ಆನೆ ನಿಯಂತ್ರಣ ತಪ್ಪಿದ ಘಟನೆಯಿಂದ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರಲ್ಲಿ ಕಾಲ್ತುಳಿತ ಸಂಭವಿಸಬಹುದೆಂಬ ಆತಂಕ ಉಂಟಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಾವುತರು ತಕ್ಷಣ ಕಾರ್ಯಪ್ರವೃತ್ತರಾದರು. ಜನರ ಸುರಕ್ಷತೆ ದೃಷ್ಟಿಯಿಂದ ಮೆರವಣಿಗೆಯ ಮುಂದಿನ ಭಾಗದ ವ್ಯವಸ್ಥೆಯಲ್ಲಿಯೂ ಕ್ರಮ ಕೈಗೊಳ್ಳಲಾಯಿತು ಎಂದು ವರದಿಯಾಗಿದೆ.

ಸಾಗರ್ ಬದಲು ಸೋಮಣ್ಣಗೆ ನೀಡಲಾಗಿತ್ತು ಜವಾಬ್ದಾರಿ : ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಕಳೆದ ಹಲವು ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಸಾಗರ್ ಆನೆಯ ಬದಲಿಗೆ ಈ ಬಾರಿ ಸೋಮಣ್ಣಗೆ ಜವಾಬ್ದಾರಿ ನೀಡಲಾಗಿತ್ತು. ಸಾಗರ್ ಆನೆಯ ಕಾಲಿನ ನೋವಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಸೋಮಣ್ಣ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದರಿಂದ ಈ ವರ್ಷದ ಮೆರವಣಿಗೆ ವಿಶೇಷ ಗಮನ ಸೆಳೆದಿತ್ತು.

ಘಟನೆಗೆ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗ ಬೇಕಿದೆ….