ಬಾಗಲಕೋಟೆ: ಬೀಳಗಿ ಪಟ್ಟಣದ ಕಾಟಕರ ಓಣಿಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣದ ಆರೋಪಿಗಳನ್ನು ಆರು ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ವೃದ್ಧೆಯ ಪುತ್ರ ಹಾಗೂ ಹಿರಿಯ ಸೊಸೆಯೇ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಮಾ. 18ರ ರಾತ್ರಿ ಕಾಟಕರ ಓಣಿಯ ಬೀರಪ್ಪ ದೇವಸ್ಥಾನದಲ್ಲಿ ಮಲಗಿದ್ದ ವೃದ್ಧೆ ಗೌರಮ್ಮ ಕೊಡೆಕಲ್ಲ (65) ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು.
ಮಾ. 19ರಂದು ಆಕೆಯ ಪುತ್ರ ಪಡಿಯಪ್ಪ ಅಯ್ಯಪ್ಪ ಕೊಡೇಕಲ್ಲ ಬೀಳಗಿ ದೂರು ನೀಡಿದ್ದು ಕೊನೆಗೆ ಅವನೇ ಆರೋಪಿ ಎಂಬುದು ಪೊಲೀಸರು ಜಾಲಾಡಿದಾಗ ಬೆಳಕಿಗೆ ಬಂದಿದೆ.
ಶಾಂತಾ ಸದಾಶಿವ ಕೊಡೇಕಲ್ಲ (30), ಕೃತ್ಯದಲ್ಲಿ ಭಾಗಿಯಾಗಿರುವ ಪ್ರಕರಣದ ದೂರುದಾರ ಪಡಿಯಪ್ಪ ಕೊಡೇಕಲ್ಲ (38) ಹಾಗೂ ಸಂಬಂಧಿ ಶಂಕರ ಬಸವಂತ ಹುನ್ನಳ್ಳಿ(21) ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ.





















