ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ ಹೃದಯಾಘಾತಕ್ಕೆ ಬಲಿ

ಬಾಗಲಕೋಟೆ: ಚಾಲುಕ್ಯರ ನಾಡು ಬಾದಾಮಿಯ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸಿದ್ದ ಫ್ರಾನ್ಸ್ ಪ್ರಜೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ. ಫ್ರಾನ್ಸ್ ಮೂಲದ ಅಲೆನ್ ಢಗೇರೋ (66) ಮೃತ ವ್ಯಕ್ತಿ. ಇವರು ತಮ್ಮ ಪುತ್ರ ವಾಸ್ಕೋ ಇಮ್ಯಾನ್ಯುಲ್ ಢಗೇರೋ ಜತೆಗೆ ಪ್ರವಾಸಕ್ಕೆ ಆಗಮಿಸಿದ್ದರು. ಅ. 10ರಿಂದ ಬಾದಾಮಿಯಲ್ಲೇ ವಾಸ್ತವ್ಯ ಹೂಡಿದ್ದರು. ಅ. 15ರ ಗುರುವಾರ ಸಂಜೆ ರೈಲಿನ ಮೂಲಕ ಅವರು ಕೇರಳಕ್ಕೆ ಪ್ರವಾಸಕ್ಕಾಗಿ ತೆರಳಬೇಕಿತ್ತು. ಆದರೆ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದರಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಚಿಕಿತ್ಸೆ … Continue reading ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ ಹೃದಯಾಘಾತಕ್ಕೆ ಬಲಿ