SK Home Ad
Home ಸುದ್ದಿ ರಾಜ್ಯ ಗುತ್ತಿಗೆದಾರರ ಬಿಲ್‌ಗೆ ಅರ್ಹತೆಯೇ ಮಾನದಂಡ; ತಾರತಮ್ಯಕ್ಕೆ ಜಾಗವಿಲ್ಲ

ಗುತ್ತಿಗೆದಾರರ ಬಿಲ್‌ಗೆ ಅರ್ಹತೆಯೇ ಮಾನದಂಡ; ತಾರತಮ್ಯಕ್ಕೆ ಜಾಗವಿಲ್ಲ

0
11

ಬೆಳಗಾವಿ: ಗುತ್ತಿಗೆದಾರರ ಬಿಲ್ ಪಾವತಿಗೆ ಅರ್ಹತೆಯೇ ಮಾನದಂಡ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿಯೂ ಎರಡು ವರ್ಷಗಳ ಬಳಿಕ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಲಾಗಿತ್ತು. ಪ್ರಸ್ತುತ ಸರ್ಕಾರದಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಮುಂದುವರಿದಿದೆ ಎಂದರು.

ಆಡಳಿತದಲ್ಲಿ ಸುಧಾರಣೆಗಳಾಗಿದ್ದು, ಅರ್ಹತೆ ಹಾಗೂ ನಿಯಮಗಳ ಆಧಾರದ ಮೇಲೆ ಬಿಲ್‌ಗಳನ್ನು ಪಾವತಿಸಲಾಗುವುದು. ಗುತ್ತಿಗೆದಾರರ ನಡುವೆ ತಾರತಮ್ಯ ಮಾಡಲಾಗುವುದಿಲ್ಲ. ಗುತ್ತಿಗೆದಾರರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದು, ಅವರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು ಎಂದರು. ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ, ಅವಕಾಶ ಸಿಕ್ಕಾಗ ಉತ್ತರ ನೀಡಲಾಗುವುದು ಸಚಿವರು ಗುಡುಗಿದರು.

ಇತಿಹಾಸದ ಅರಿವು ಹಾಗೂ ಜ್ಞಾನದ ಕೊರತೆ ಇರುವವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ದಿನ ಅಪಪ್ರಚಾರ ಮಾಡುತ್ತಾರೋ ಮಾಡಲಿ. ಕಳೆದ 30-40 ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಬಂದಿರುವ ನಾವು, ಅಂತಹವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇವೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಉತ್ತರ ಭಾರತದಿಂದ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ತಮ್ಮನ್ನು ಸಿಲುಕಿಸಲು ಪ್ರಯತ್ನಗಳು ನಡೆದಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿಗಳೇ ಈ ಕುರಿತು ಸ್ಪಷ್ಟವಾಗಿ ಎಚ್ಚರಿಕೆ ನೀಡಿರುವುದರಿಂದ ಹೆಚ್ಚುವರಿಯಾಗಿ ಏನನ್ನೂ ಹೇಳುವ ಅಗತ್ಯವಿಲ್ಲ. ನಮ್ಮ ಬಳಿ ಅಂತಹ ಯಾವುದೇ ವ್ಯಕ್ತಿಗಳು ಬಂದಿಲ್ಲ. ಆದರೂ ಇಂತಹ ವಿಚಾರಗಳಲ್ಲಿ ಜಾಗರೂಕರಾಗಿರಬೇಕು ಎಂದು ತಿಳಿಸಿದರು.