SK Home Ad
Home ಸಿನಿ ಮಿಲ್ಸ್ ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಟ್ರೈಲರ್ ರಿಲೀಸ್: ಅಕ್ಟೋಬರ್ 16ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆ

ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಟ್ರೈಲರ್ ರಿಲೀಸ್: ಅಕ್ಟೋಬರ್ 16ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆ

0
34

ಬೆಂಗಳೂರು: ನಿರ್ದೇಶಕ ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಣಬಾಲಿ’ ಚಿತ್ರದ ರೋಮಾಂಚನಕಾರಿ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. 3 ನಿಮಿಷ 47 ಸೆಕೆಂಡುಗಳ ಈ ಟ್ರೈಲರ್‌ನಲ್ಲಿ ನಟ ವಿಜಯ್ ದೇವರಕೊಂಡ ‘ಶಿಂಗನಮಲ ಬೊಬ್ಬಿಲಿ ರಣಬಾಲಿ’ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

1854ರಿಂದ 1878ರ ಅವಧಿಯಲ್ಲಿ ಬ್ರಿಟಿಷ್ ಇಂಡಿಯಾದ ರಾಯಲಸೀಮಾ ಪ್ರಾಂತ್ಯದಲ್ಲಿ ನಡೆದ ರಕ್ತಸಿಕ್ತ ನೈಜ ಘಟನೆಗಳನ್ನಾಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದುನಿಂತ ವೀರನಾಗಿ ವಿಜಯ್ ದೇವರಕೊಂಡ ರೌದ್ರಾವತಾರ ತಳೆದಿದ್ದರೆ, ಬ್ರಿಟಿಷ್ ಅಧಿಕಾರಿ ‘ಸರ್ ಥಿಯೋಡರ್ ಹೆಕ್ಟರ್’ ಪಾತ್ರದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಗಮನಸೆಳೆದಿದ್ದಾರೆ.
ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ‘ಜಯಮ್ಮ’ ಎಂಬ ಅರ್ಧಾಂಗಿಯ ಪಾತ್ರದಲ್ಲಿ ನಟಿಸಿದ್ದಾರೆ. ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರಗಳ ಯಶಸ್ಸಿನ ಬಳಿಕ, ರಿಯಲ್ ಲೈಫ್‌ನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.

ಮೈತ್ರಿ ಮೂವಿ ಮೇಕರ್ಸ್ ಹಾಗೂ ಟಿ-ಸೀರೀಸ್ ಜಂಟಿಯಾಗಿ ನಿರ್ಮಿಸಿರುವ ಈ ದೃಶ್ಯಕಾವ್ಯಕ್ಕೆ ಅಜಯ್-ಅತುಲ್ ಸಂಗೀತ ಸಂಯೋಜಿಸಿದ್ದು, ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಛಾಯಾಗ್ರಹಣ ಒದಗಿಸಿದ್ದಾರೆ. ‘ರಣಬಾಲಿ’ ಸಿನಿಮಾವು ಮುಂಬರುವ ಅಕ್ಟೋಬರ್ 16ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.