ಮುಂಬೈ: ಭಾರತದ ಮುಂಚೂಣಿ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಇ-ಕಾಮರ್ಸ್ ವೇದಿಕೆಗಳಲ್ಲಿ ಒಂದಾದ ಅಜಿಯೋ (AJIO), 2026ರ ಹಬ್ಬದ ಋತುವಿನ ವಿಶೇಷ ಅಭಿಯಾನಕ್ಕೆ ನಟ ಅಹಾನ್ ಪಾಂಡೆ ಅವರನ್ನು ತನ್ನ ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪರಿಚಯಿಸಿದೆ. ‘Festival is Festivalling’ ಎಂಬ ಘೋಷವಾಕ್ಯದಡಿ ಆರಂಭವಾಗಿರುವ ಈ ಅಭಿಯಾನವು ಭಾರತದ ಹಬ್ಬಗಳ ಸಂಭ್ರಮ, ಉತ್ಸಾಹ ಮತ್ತು ವೈವಿಧ್ಯತೆಯನ್ನು ಆಧುನಿಕ ಫ್ಯಾಷನ್ ಶೈಲಿಯ ಮೂಲಕ ಸಂಭ್ರಮಿಸುತ್ತದೆ.
ಹಬ್ಬದ ಖರೀದಿ ಅವಧಿಗೆ ಸಜ್ಜಾಗಿರುವ ಅಜಿಯೋ, ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲು ಮುಂದಾಗಿದ್ದು, ‘ಅಜಿಯೋ ಆಲ್ ಸ್ಟಾರ್ಸ್ ಸೇಲ್’ ಅಕ್ಟೋಬರ್ 7ರಿಂದ ಆರಂಭವಾಗಲಿದೆ. ಹಬ್ಬದ ಆರಂಭಿಕ ಕೊಡುಗೆಗಳ ದರಗಳು ಈಗಾಗಲೇ ಲೈವ್ ಆಗಿವೆ.
ಈ ಅಭಿಯಾನದ ಮುಖವಾಗಿರುವ ಅಹಾನ್ ಪಾಂಡೆ, ತಮ್ಮ ವಿಶಿಷ್ಟ ಶೈಲಿ ಮತ್ತು ಯುವಜನತೆಗೆ ಹತ್ತಿರವಾಗಿರುವ ವ್ಯಕ್ತಿತ್ವದ ಮೂಲಕ ಅಜಿಯೋದ ಹಬ್ಬದ ಅಭಿಯಾನಕ್ಕೆ ಹೊಸ ಚೈತನ್ಯ ತುಂಬಲಿದ್ದಾರೆ. ಗ್ರಾಹಕರು ತಮ್ಮದೇ ಆದ ಹಬ್ಬದ ಲುಕ್‌ಗಳನ್ನು ಕಂಡುಕೊಳ್ಳಲು ಮತ್ತು ತಮ್ಮ ಫ್ಯಾಷನ್ ಅಭಿರುಚಿಯನ್ನು ಅಭಿವ್ಯಕ್ತಗೊಳಿಸಲು ಈ ಅಭಿಯಾನ ಪ್ರೇರೇಪಿಸುತ್ತದೆ.
ಅಜಿಯೋ ತನ್ನ ಬ್ರ್ಯಾಂಡ್ ಪೋರ್ಟ್‌ಫೋಲಿಯೊ, ಹೊಸ ವಿಭಾಗಗಳು ಮತ್ತು ಕಲೆಕ್ಷನ್‌ಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಹೆಚ್ಚು ಸಂಪರ್ಕಿತ ಹಾಗೂ ಸುಗಮ ಶಾಪಿಂಗ್ ಅನುಭವವನ್ನು ಒದಗಿಸುವತ್ತ ಗಮನ ಹರಿಸಿದೆ. ಅಜಿಯೋ ರಶ್, ವಿಸ್ತರಿತ ಸೇವಾ ವ್ಯಾಪ್ತಿ ಮತ್ತು ಸುಲಭ ರಿಟರ್ನ್ ಸೌಲಭ್ಯಗಳ ಮೂಲಕ ದೇಶದಾದ್ಯಂತ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ.
ಈ ಹೊಸ ಸಹಯೋಗದ ಕುರಿತು ಪ್ರತಿಕ್ರಿಯಿಸಿದ ಅಜಿಯೋ ವಕ್ತಾರರು, “ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಬ್ರ್ಯಾಂಡ್ ಆಯ್ಕೆಗಳು, ಹೊಸ ಫ್ಯಾಷನ್ ಡ್ರಾಪ್‌ಗಳು, ವಿಸ್ತರಿತ ಸೇವಾ ವ್ಯಾಪ್ತಿ ಹಾಗೂ ವೇಗದ ವಿತರಣಾ ಆಯ್ಕೆಗಳನ್ನು ನೀಡುತ್ತಿದ್ದೇವೆ. ಅಹಾನ್ ಪಾಂಡೆ ಅವರೊಂದಿಗಿನ ನಮ್ಮ ಹೊಸ ಅಭಿಯಾನವು ಭಾರತದ ಹಬ್ಬದ ಸಂಭ್ರಮವನ್ನು ಸಮಕಾಲೀನ ದೃಷ್ಟಿಕೋನದಿಂದ ಆಚರಿಸುತ್ತದೆ,” ಎಂದು ತಿಳಿಸಿದ್ದಾರೆ.
ಅಹಾನ್ ಪಾಂಡೆ ಮಾತನಾಡಿ, “ಫ್ಯಾಷನ್ ಅನ್ನು ಸರಳ, ವೈಯಕ್ತಿಕ ಹಾಗೂ ರೋಮಾಂಚಕವಾಗಿ ಅನುಭವಿಸುವಂತೆ ಮಾಡುವ ಬ್ರ್ಯಾಂಡ್ ಅಜಿಯೋ. ಉಡುಪಿನ ಮೂಲಕ ವ್ಯಕ್ತಿತ್ವವನ್ನು ಅಭಿವ್ಯಕ್ತಪಡಿಸಬಹುದು ಎಂಬ ವಿಚಾರ ನನಗೆ ತುಂಬಾ ಇಷ್ಟ. ಆ ಉತ್ಸಾಹವನ್ನು ಸಂಭ್ರಮಿಸುವ ಬ್ರ್ಯಾಂಡ್‌ನ ಭಾಗವಾಗಿರುವುದು ಸಂತೋಷ ತಂದಿದ್ದು, ಈ ಹಬ್ಬದ ಋತುವಿನೊಂದಿಗೆ ಅಜಿಯೋ ಜತೆಗಿನ ನನ್ನ ಪಯಣವನ್ನು ಆರಂಭಿಸಲು ಕಾತರನಾಗಿದ್ದೇನೆ,” ಎಂದು ಹೇಳಿದ್ದಾರೆ.
ಫ್ಯಾಷನ್, ಪಾದರಕ್ಷೆಗಳು, ಆಕ್ಸೆಸರೀಸ್ ಹಾಗೂ ಬ್ಯೂಟಿ ವಿಭಾಗಗಳಲ್ಲಿ ಮೌಲ್ಯಾಧಾರಿತ, ಪ್ರೀಮಿಯಂ ಮತ್ತು ಲಕ್ಸುರಿ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಅಜಿಯೋ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಸೇರಿ 9,000ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೊ ಹೊಂದಿದೆ. ದೇಶದ ಎಲ್ಲ ಪಿನ್‌ಕೋಡ್‌ಗಳಿಗೆ ವಿತರಣಾ ಸೇವೆ ನೀಡುತ್ತಿರುವ ಅಜಿಯೋ, 600ಕ್ಕೂ ಹೆಚ್ಚು ನಗರಗಳಲ್ಲಿ ‘ಅಜಿಯೋ ರಶ್’ ಮೂಲಕ ವೇಗದ ಡೆಲಿವರಿಯ ಸೌಲಭ್ಯವನ್ನೂ ಒದಗಿಸುತ್ತಿದೆ.





















