ದಾವಣಗೆರೆ: ಹಿಂದೂ ಮಹಾಗಣಪತಿ ಗಣೇಶಮೂರ್ತಿ ವಿಸರ್ಜನಾ ಬೃಹತ್ ಶೋಭಾಯಾತ್ರೆ ವೇಳೆ ಡಿಜೆಗೆ ಅಳವಡಿಸಿದ್ದ ಆರ್ಚ್ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಶನಿವಾರ ಸಂಜೆ ನಗರದ ಹಳೆಯ ಬಸ್ ನಿಲ್ದಾಣದ ಬಳಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಂಡಗತ್ತಿ ಗ್ರಾಮದ ಸಿದ್ದಲಿಂಗಪ್ಪ (45) ಗಾಯಗೊಂಡವರು. ಮಹಾನಗರಪಾಲಿಕೆ ವ್ಯಾಪ್ತಿಯ ಯರಗುಂಟೆ ಗ್ರಾಮದಲ್ಲಿರುವ ಮಗಳ ಮನೆಗೆ ಬಂದಿದ್ದ ಅವರು, ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದರು.
ಶೋಭಾಯಾತ್ರೆ ಹಳೆಯ ಬಸ್ ನಿಲ್ದಾಣದ ಸಮೀಪ ಬಂದಾಗ, ಮೆರವಣಿಗೆಯಲ್ಲಿ ಬಳಸಲಾಗಿದ್ದ ಆರು ಡಿಜೆಗಳ ಪೈಕಿ ಮೊದಲ ಡಿಜೆಗೆ ಅಳವಡಿಸಿದ್ದ ಆರ್ಚ್ ಏಕಾಏಕಿ ಸಿದ್ದಲಿಂಗಪ್ಪ ಅವರ ಮೇಲೆ ಬಿದ್ದಿದೆ. ಇದರಿಂದ ಅವರು ಗಾಯಗೊಂಡರು. ತಕ್ಷಣ ಸ್ಥಳದಲ್ಲಿದ್ದ ಡಿವೈಎಸ್ಪಿ ಬಂಕಾಳೆ ನಾಗಪ್ಪ ಅವರು ಗಾಯಾಳುವನ್ನು ತಮ್ಮ ವಾಹನದಲ್ಲೇ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
- ಕನ್ನಡಿಗರ ಮನಗೆದ್ದು ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಈಗ ಒಟಿಟಿಗೆ ಲಗ್ಗೆ!
- IIT ದೆಹಲಿ: ಜಾಗತಿಕ ಪಟ್ಟಿಯಲ್ಲಿ194ನೇ ಸ್ಥಾನ -ಭಾರತದಲ್ಲಿ ನಂ.1 ಪಟ್ಟ
- CSK ದಿಗ್ಗಜನಿಗೆ RCB ಸಲಾಂ: ಮೆಂಟರ್ ಇನ್ನಿಂಗ್ಸ್ ಆರಂಭಕ್ಕೆ ವಿಶೇಷ ಗೌರವ!
- ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್ : ಬಂಗಾಳದಲ್ಲಿ ಸರ್ಕಾರಿ ಉದ್ಯೋಗ ಪರೀಕ್ಷೆಗಳ ಅರ್ಜಿ ಶುಲ್ಕ ರದ್ದು!
- 5 ಬಾರಿ ಚಾಂಪಿಯನ್ ಮಾಡಿದ ‘ತಲಾ’: ಈಗ CSK ಮೆಂಟರ್ ಆಗಿ ಹೊಸ ಇನ್ನಿಂಗ್ಸ್!




















