SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ 88 ಲಕ್ಷ ಸಾಲದ ಸತ್ಯ ಬಿಚ್ಚಿಟ್ಟ ನಟ ಅವಿನಾಶ್!

ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ 88 ಲಕ್ಷ ಸಾಲದ ಸತ್ಯ ಬಿಚ್ಚಿಟ್ಟ ನಟ ಅವಿನಾಶ್!

0
11

‘ಬಿಗ್ ಬಾಸ್ ಕನ್ನಡ ಸೀಸನ್ 13’ ಸ್ಪರ್ಧಿ, ನಟ ಅವಿನಾಶ್ ಶಠಮರ್ಷಣ ದೊಡ್ಮನೆಯಿಂದ ಎಲಿಮಿನೇಟ್ ಆದ ಬೆನ್ನಲ್ಲೇ ತಮ್ಮ ವೈಯಕ್ತಿಕ ಜೀವನದ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೇಲೆ ಬರೋಬ್ಬರಿ 88 ಲಕ್ಷ ರೂಪಾಯಿ ಸಾಲವಿದೆ ಎಂಬ ಸತ್ಯವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರಿಯಾಲಿಟಿ ಶೋ ಗೆದ್ದು ಬರುವ ಹಣದಿಂದ ಆರ್ಥಿಕ ಸಂಕಷ್ಟ ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾಗಿ ಹೇಳಿದ ಅವಿನಾಶ್, “ಬಿಗ್ ಬಾಸ್ ನಗದು ಬಹುಮಾನ ಸಿಕ್ಕಿದ್ದರೆ ಪೂರ್ತಿ ಹಣವನ್ನು ಸಾಲ ತೀರಿಸಲು ಬಳಸುತ್ತಿದ್ದೆ. ಶೋನಲ್ಲಿ ಸಿಗುವ ವಿನ್ನರ್ ಮೊತ್ತಕ್ಕಿಂತಲೂ ಹೆಚ್ಚಿನ ಸಾಲ ನನ್ನ ಮೇಲಿದೆ” ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ಸಿನಿಮಾ ನಿರ್ಮಾಣ, ಹೋಟೆಲ್ ಹಾಗೂ ಹೋಮ್ ಸ್ಟೇ ಉದ್ಯಮದ ಪ್ರಯೋಗಗಳಲ್ಲಿ ಅನುಭವಿಸಿದ ನಷ್ಟವೇ ಈ ಸಾಲಕ್ಕೆ ಕಾರಣ ಎನ್ನಲಾಗಿದೆ. “ನನ್ನನ್ನು ನಂಬಿ ಹಣ ಕೊಟ್ಟವರಿಗೆ ವಾಪಸ್ ನೀಡಲಾಗದಿರುವುದು ನನ್ನ ಸೋಲು. ಪ್ರಸ್ತುತ ಮನೆ ನಿರ್ವಹಣೆ ಹಾಗೂ ಆರ್ಥಿಕ ಜವಾಬ್ದಾರಿಯನ್ನು ಪತ್ನಿ ಪ್ರಿಯಾ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಕಷ್ಟಪಟ್ಟು ಸಂಪಾದಿಸಿ ಎಲ್ಲಾ ಸಾಲ ತೀರಿಸುವುದಾಗಿ ಅವಿನಾಶ್ ಮಾತು ಕೊಟ್ಟಿದ್ದೇನೆ” ಎಂದು ತಿಳಿಸಿದ್ದಾರೆ.

ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದು, ಮತ್ತು ಕರ್ಲಸ್‌ ಕನ್ನಡದ ಲಕ್ಷಣ ಧಾರಾವಾಹಿಯಲ್ಲು ವಿಲನ್‌ ಪಾತ್ರಾದಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾ ಅವರೇ ಅವಿನಾಶ್ ಪತ್ನಿ. ಬಿಗ್ ಬಾಸ್ ಮನೆಯಲ್ಲಿ ಶಾಂತ ಸ್ವಭಾವ ಹಾಗೂ ವಿಭಿನ್ನ ಶೈಲಿಯ ಆಟದಿಂದ ಗಮನ ಸೆಳೆದಿದ್ದ ಅವಿನಾಶ್, ವೀಕ್ಷಕರ ನಿರೀಕ್ಷೆಗೆ ತಕ್ಕಂತೆ ಮಿಂಚಲು ಸಾಧ್ಯವಾಗದೆ ಇತ್ತೀಚೆಗಷ್ಟೇ ಮನೆಯಿಂದ ಹೊರಬಿದ್ದಿದ್ದಾರೆ.