SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್‌ನಿಂದ ಔಟ್ ಬೆನ್ನಲ್ಲೇ ಆಸಿಯಾ ವಿರುದ್ಧ ಸಿಡಿದೆದ್ದ ವೈಷ್ಣವಿ: ಡ್ರಾಮಾ, ವಿಕ್ಟಿಮ್ ಕಾರ್ಡ್ ಆರೋಪ!

ಬಿಗ್ ಬಾಸ್‌ನಿಂದ ಔಟ್ ಬೆನ್ನಲ್ಲೇ ಆಸಿಯಾ ವಿರುದ್ಧ ಸಿಡಿದೆದ್ದ ವೈಷ್ಣವಿ: ಡ್ರಾಮಾ, ವಿಕ್ಟಿಮ್ ಕಾರ್ಡ್ ಆರೋಪ!

0
2

‘ಬಿಗ್ ಬಾಸ್ ಕನ್ನಡ 13’ ಸ್ಪರ್ಧೆಯಿಂದ 3ನೇ ವಾರವೇ ‘ಪ್ರೇಮ ಕಾವ್ಯ’ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಎಲಿಮಿನೇಟ್ ಆಗಿದ್ದಾರೆ. ದೈಹಿಕವಾಗಿ ಬಲಶಾಲಿಯಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದ ಸ್ಪರ್ಧಿಗಳು ಅವರನ್ನು ಆಟದಿಂದ ಮೂಲೆಗುಂಪು ಮಾಡಿದ್ದರು. ಆದ್ರೂ ತಪ್ಪು ಕಂಡುಬಂದಲ್ಲಿ ಧ್ವನಿ ಎತ್ತಲು ಎಂದಿಗೂ ಹಿಂಜರಿಯಲಿಲ್ಲ. ಇದಷ್ಟು ದಿನ ಒಳ್ಳೆಯ ವ್ಯಕ್ತಿತ್ವ ಗಳಿಸಿಕೊಂಡು ಹೊರ ಬಂದಿದ್ದಾರೆ.

ಫ್ಲೈಟ್ ಥೀಮ್‌ ನೀಡಲಾಗಿದ್ದ ಆರಂಭದ ವಾರಗಳ ಅನುಭವ ಹಂಚಿಕೊಂಡ ವೈಷ್ಣವಿ, “ನಾವು ಬಿಗ್ ಬಾಸ್ ಮನೆಗೆ ಹೋಗುತ್ತೇವೆ ಅಂದುಕೊಂಡಿದ್ದೆವು. ಆದ್ರೆ ಫ್ಲೈಟ್‌ನಲ್ಲೇ ನಿರಂತರ ಕಿತ್ತಾಟ ನಡೆದು ಸಾಕಾಗಿತ್ತು. ನಂತರ ಮನೆಗೆ ಹೋದಾಗ ದೊಡ್ಡ ರಿಲೀಫ್ ಸಿಕ್ಕಿತು. ಆದ್ರೆ ಅಲ್ಲಿ ಎಲ್ಲರ ವ್ಯಕ್ತಿತ್ವ ಬದಲಾಗಿ ಹೊಸ ಸವಾಲು ಎದುರಾಯಿತು. ಎರಡನೇ ವಾರ ನನಗೆ ಆಡಲು ಅವಕಾಶವೇ ಸಿಗಲಿಲ್ಲ, ಸುಮ್ಮನೆ ಕೂರಿಸಿದ್ದು ನನ್ನ ಎಲಿಮಿನೇಷನ್‌ಗೆ ಪ್ರಮುಖ ಕಾರಣವಾಯಿತು” ಎಂದಿದ್ದಾರೆ.

ಸಹ-ಸ್ಪರ್ಧಿ ಆಸಿಯಾ ವಿರುದ್ಧ ಗರಂ ಆಗಿರುವ ವೈಷ್ಣವಿ, “ಸ್ವಿಮ್ಮಿಂಗ್ ಪೂಲ್ ಟಾಸ್ಕ್‌ನಲ್ಲಿ ಆಸಿಯಾ ಬಿಗ್ ಟೈಮ್ ಡ್ರಾಮಾ ಮಾಡಿದರು. ತಲೆ ಮೇಲಿದ್ದ ಕ್ರೌನ್ ನೆಪವಿಟ್ಟುಕೊಂಡು ‘ನಾನು ಇಷ್ಟೇ ಆಡೋದು’ ಎಂದು ಈಗೋ ತೋರಿಸಿದರು. ನಾವಿಲ್ಲಿ ಕಡ್ಲೆಪುರಿ ತಿನ್ನೋಕೆ ಬಂದಿದ್ದೀವಾ? ಸಡನ್ ಆಗಿ ಅತ್ತುಕೊಂಡು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು. ಪೈಪ್ ಜೋಡಿಸುವ ಟಾಸ್ಕ್‌ನಲ್ಲೂ ಆಸಿಯಾ ಕಣ್ಣೀರು ನಿಜ ಎನಿಸಲಿಲ್ಲ. ಸೋತಾಗಲೆಲ್ಲ ವಿಕ್ಟಿಮ್ ಕಾರ್ಡ್ ಬಳಸುವುದು ಅವರ ಅಭ್ಯಾಸ” ಎಂದು ಸಂದರ್ಶನ ಒಂದರಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರೂ ಸಹ ಆಸಿಯಾಳ ಈ ನಡೆಯನ್ನೇ ಎತ್ತಿ ತೋರಿಸಿದ್ದಾರೆ ಎಂದು ವೈಷ್ಣವಿ ಹೇಳಿದ್ದರು.