ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಸಿದ್ಧತೆಗಳು ವೇಗ ಪಡೆದುಕೊಂಡಿದ್ದು, ಸೆಪ್ಟೆಂಬರ್ 28ರಂದು ಐದು ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ (Retained) ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. 2027ರ WPL ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದ್ದು, ಆಟಗಾರರ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 13 ಆಟಗಾರರನ್ನು ಉಳಿಸಿಕೊಂಡಿದೆ. ನಾಯಕಿ ಸ್ಮೃತಿ ಮಂದಾನ, ರಿಚಾ ಘೋಷ್, ಎಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರಥ್ಯುಷಾ ಕುಮಾರ್ ಮತ್ತು ಸಯಾಲಿ ಸತ್ಘರೆ RCBಯಲ್ಲಿ ಮುಂದುವರಿಯಲಿದ್ದಾರೆ. ನಾಲ್ವರನ್ನು ಬಿಡುಗಡೆ ಮಾಡಲಾಗಿದ್ದು, ಗ್ರೇಸ್ ಹ್ಯಾರಿಸ್, ಲಿನ್ಸಿ ಸ್ಮಿತ್, ಗೌತಮಿ ನಾಯಕ್ ಮತ್ತು ದಯಾಳನ್ ಹೇಮಲತಾ ಅವರ ಹೆಸರುಗಳು ಬಿಡುಗಡೆಯಾದ ಪಟ್ಟಿಯಲ್ಲಿವೆ.
ವಿಶೇಷವಾಗಿ ಎಲಿಸ್ ಪೆರ್ರಿ ಮತ್ತೆ RCB ತಂಡಕ್ಕೆ ಲಭ್ಯರಾಗಿರುವುದು ಗಮನಾರ್ಹ. ವೈಯಕ್ತಿಕ ಕಾರಣಗಳಿಂದ 2026ರ ಪ್ರಶಸ್ತಿ ಗೆದ್ದ RCB ತಂಡದ ಭಾಗವಾಗಲು ಸಾಧ್ಯವಾಗದಿದ್ದ ಪೆರ್ರಿ, 2027ರ ಆವೃತ್ತಿಗೆ ಲಭ್ಯತೆ ಖಚಿತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ (MI) 11 ಆಟಗಾರರನ್ನು ಉಳಿಸಿಕೊಂಡಿದೆ. ಹರ್ಮನ್ಪ್ರೀತ್ ಕೌರ್, ಅಮೆಲಿಯಾ ಕೆರ್, ಹೇಲಿ ಮ್ಯಾಥ್ಯೂಸ್, ನ್ಯಾಟಲಿ ಸ್ಕಿವರ್-ಬ್ರಂಟ್, ನಿಕೋಲಾ ಕ್ಯಾರಿ, ಅಮನ್ಜೋತ್ ಕೌರ್, ರಹಿಲಾ ಫಿರ್ದೌಸ್, ಎಸ್. ಸಜನ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್ ಮತ್ತು ವೈಷ್ಣವಿ ಶರ್ಮಾ ತಂಡದಲ್ಲಿ ಮುಂದುವರಿಯಲಿದ್ದಾರೆ. ಗೇಬ್ರಿಯೆಲ್ ಕಮಲಿನಿ, ಮಿಲ್ಲಿ ಇಲ್ಲಿಂಗ್ವರ್ತ್, ನಲ್ಲಾ ರೆಡ್ಡಿ, ಪೂನಂ ಖೇಮ್ನಾರ್, ಸೈಕಾ ಇಶಾಕ್ ಮತ್ತು ತ್ರಿವೇಣಿ ವಸಿಷ್ಠ ಅವರನ್ನು ಬಿಡುಗಡೆ ಮಾಡಲಾಗಿದೆ.
ದೆಹಲಿ ಕ್ಯಾಪಿಟಲ್ಸ್ (DC) 13 ಆಟಗಾರರನ್ನು ಉಳಿಸಿಕೊಂಡಿದೆ. ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಯಾ ಯಾದವ್, ನಿಕಿ ಪ್ರಸಾದ್, ಮಿನ್ನು ಮಣಿ, ಎನ್. ಚರಣಿ, ಮಮತಾ ಮಡಿವಾಳ ಮತ್ತು ನಂದಿನಿ ಶರ್ಮಾ ಸೇರಿದಂತೆ ಎಂಟು ಭಾರತೀಯ ಆಟಗಾರರು ಹಾಗೂ ಲಾರಾ ವೋಲ್ವಾರ್ಡ್, ಅನ್ನಾಬೆಲ್ ಸದರ್ಲ್ಯಾಂಡ್, ಚಿನೆಲ್ಲೆ ಹೆನ್ರಿ, ಲೂಸಿ ಹ್ಯಾಮಿಲ್ಟನ್ ಮತ್ತು ಮರಿಜಾನ್ ಕಾಪ್ ಅವರಂತಹ ಐವರು ವಿದೇಶಿ ಆಟಗಾರರು ಉಳಿದಿದ್ದಾರೆ.
ಯುಪಿ ವಾರಿಯರ್ಝ್ (UPW) 11 ಆಟಗಾರರನ್ನು ಉಳಿಸಿಕೊಂಡಿದೆ. ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಮೆಗ್ ಲ್ಯಾನಿಂಗ್, ಫೋಬಿ ಲಿಚ್ಫೀಲ್ಡ್, ಪ್ರತಿಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್ ಶೇಖ್, ಸೋಫಿ ಎಕ್ಲೆಸ್ಟೋನ್ ಮತ್ತು ತಾರಾ ನಾರಿಸ್ ತಂಡದಲ್ಲಿ ಮುಂದುವರಿಯಲಿದ್ದಾರೆ.
ಗುಜರಾತ್ ಜೈಂಟ್ಸ್ (GG) ಅತಿ ಹೆಚ್ಚು 15 ಆಟಗಾರರನ್ನು ಉಳಿಸಿಕೊಂಡಿದೆ. ಆಶ್ಲೇ ಗಾರ್ಡ್ನರ್, ಬೆತ್ ಮೂನಿ, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಡಿವೈನ್, ಕಿಮ್ ಗಾರ್ತ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಕಾಶ್ವೀ ಗೌತಮ್, ಕನಿಕಾ ಅಹುಜಾ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.
2027ರ WPL ಹರಾಜು ಅಕ್ಟೋಬರ್ 28ರಂದು ಕೊಚ್ಚಿಯ ಗ್ರ್ಯಾಂಡ್ ಹಯಾತ್ನಲ್ಲಿ ನಡೆಯಲಿದೆ. ಐದು ತಂಡಗಳು ಉಳಿಸಿಕೊಂಡ ಆಟಗಾರರ ಆಧಾರದ ಮೇಲೆ ತಮ್ಮ ಉಳಿದ ಸ್ಥಾನಗಳನ್ನು ಹರಾಜಿನಲ್ಲಿ ತುಂಬಿಕೊಳ್ಳಲಿವೆ. ಹೊಸ WPL ಋತು ಜನವರಿ 14ರಿಂದ ಫೆಬ್ರವರಿ 7, 2027ರವರೆಗೆ ನಡೆಯಲಿದೆ.
ಹೀಗಾಗಿ, ಸೆಪ್ಟೆಂಬರ್ 28ರ ರಿಟೆನ್ಶನ್ ಘೋಷಣೆಗಳ ಬಳಿಕ ಇದೀಗ ತಂಡಗಳ ಗಮನ ಅಕ್ಟೋಬರ್ 28ರ ಆಟಗಾರರ ಹರಾಜಿನತ್ತ ನೆಟ್ಟಿದೆ.
ಪ್ರತಿ ಹೊಸ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್ಡೇಟ್ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















