SK Home Ad
Home ಸಿನಿ ಮಿಲ್ಸ್ ಸಮಂತಾಗೆ ಸೀಮಂತ ಶಾಸ್ತ್ರ: ವಿಶೇಷ ಫೋಟೋಗಳು ವೈರಲ್! ಇಲ್ಲಿದೆ ಮಾಹಿತಿ

ಸಮಂತಾಗೆ ಸೀಮಂತ ಶಾಸ್ತ್ರ: ವಿಶೇಷ ಫೋಟೋಗಳು ವೈರಲ್! ಇಲ್ಲಿದೆ ಮಾಹಿತಿ

0
16

ಬೆಂಗಳೂರು: ಖ್ಯಾತ ನಟಿ ಸಮಂತಾ ಋತ್ ಪ್ರಭು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ತಾವು ಮದುವೆಯಾಗಿದ್ದ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲೇ ಈ ಪವಿತ್ರ ಆಚರಣೆ ನಡೆದಿದ್ದು, ಪತಿ ಹಾಗೂ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಸರಳ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಸಮಂತಾ, ಈ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಶ್ರೀವಿದ್ಯಾ ಸಂಪ್ರದಾಯ’ದ ‘ಕಲಾ ಆವರಣ’ ಹಾಗೂ ‘ಶ್ರೀಚಕ್ರ ಯಂತ್ರ ಬಿಂದು’ ಆಚರಣೆಗಳ ಮೂಲಕ ಮಗುವಿನ ಕ್ಷೇಮ ಮತ್ತು ತಾಯ್ತನದ ರಕ್ಷಣೆಗೆ ಪೂಜೆ ಸಲ್ಲಿಸಲಾಯಿತು. ಗೆಳತಿ ಶಿಲ್ಪಾ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪೂಜೆಯಲ್ಲಿ ದೇವೀ ಖಡ್ಗಮಾಲಾ ಪಠಣವೂ ನಡೆಯಿತು.

“ಸಂಪ್ರದಾಯದ ಮಂತ್ರಗಳಲ್ಲಿ ಆಳವಾದ ದೈವಿಕ ಶಕ್ತಿಯಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿರುವ ಸಮಂತಾ ಅವರಿಗೆ ನಟಿಯರಾದ ಉಪಾಸನಾ ಕಾಮಿನೇನಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. 39ನೇ ವಯಸ್ಸಿನಲ್ಲಿ ಸಮಂತಾ ತಾಯ್ತನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ.