SK Home Ad
Home ನಮ್ಮ ಜಿಲ್ಲೆ ಧಾರವಾಡ ರೈಲು ಕಾರ್ಯಾಚರಣೆ, ಸುರಕ್ಷತೆ ಪರಿಶೀಲಿಸಿದ ಸಚಿವ ಸೋಮಣ್ಣ: ಸಿಬ್ಬಂದಿಯ ಶಿಸ್ತಿಗೆ ಶ್ಲಾಘನೆ

ರೈಲು ಕಾರ್ಯಾಚರಣೆ, ಸುರಕ್ಷತೆ ಪರಿಶೀಲಿಸಿದ ಸಚಿವ ಸೋಮಣ್ಣ: ಸಿಬ್ಬಂದಿಯ ಶಿಸ್ತಿಗೆ ಶ್ಲಾಘನೆ

0
56

ಹುಬ್ಬಳ್ಳಿ: ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ದೆಹಲಿ ವಿಭಾಗದ ಕಂಟ್ರೋಲ್ ಕಚೇರಿಗೆ ಭೇಟಿ ನೀಡಿ ಸುರಕ್ಷತೆ, ರೈಲು ಕಾರ್ಯಾಚರಣೆ, ಸಮಯಪಾಲನೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಪರಿಶೀಲನೆ ನಡೆಸಿದರು.

ದೆಹಲಿ ಡಿಆರ್‌ಎಂ ಪುಷ್ಪೇಶ್ ಆರ್. ತ್ರಿಪಾಠಿ ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿದ ಅವರು, ಸೆಕ್ಷನ್ ಕಂಟ್ರೋಲ್, ಇಂಜಿನಿಯರಿಂಗ್, ಕೋಚಿಂಗ್, ಗೂಡ್ಸ್, ಕಮರ್ಷಿಯಲ್, ಸಿಗ್ನಲ್ & ಟೆಲಿಕಾಂ, ಟ್ರಾಕ್ಷನ್, ಸೆಕ್ಯುರಿಟಿ ಹಾಗೂ ಕೇಂದ್ರ ಮತ್ತು ವಾರ್ ರೂಮ್ ಕಾರ್ಯವೈಖರಿ ವೀಕ್ಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ತಂತ್ರಜ್ಞಾನ ಅಳವಡಿಕೆ ವೇಗವಾಗಿದೆ. ಇದರಿಂದ ಮಾನವ ದೋಷ ಕಡಿಮೆಯಾಗಿ ಸುರಕ್ಷತೆ ಹೆಚ್ಚಿದೆ ಎಂದರು. ರೈಲ್ವೆ ಸಿಬ್ಬಂದಿ ಸೇನೆಯಂತೆ ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.