ವೆಬ್‌ಸೀರಿಸ್ ಬಳಿಕ ಬೆಳ್ಳಿತೆರೆಗೆ ‘ಮಿರ್ಜಾಪುರ’ – ಮೊದಲ ದಿನವೇ ಸದ್ದು : ಜನಪ್ರಿಯ ಕ್ರೈಂ ವೆಬ್‌ಸೀರಿಸ್ ಮಿರ್ಜಾಪುರ ಇದೀಗ ಸಿನಿಮಾವಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 4ರಂದು ‘Mirzapur: The Movie’ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸರಣಿಯ ಜನಪ್ರಿಯ ಪಾತ್ರಗಳಾದ ಕಾಲೀನ್ ಭಯ್ಯಾ, ಗುಡ್ಡು ಪಂಡಿತ್ ಹಾಗೂ ಮುನ್ನಾ ತ್ರಿಪಾಠಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇಸ್ರೋ ಸೃಷ್ಟಿಸಿದ ಹೊಸ ಇತಿಹಾಸ – ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ ಕಕ್ಷೆಗೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಶುಕ್ರವಾರ ಸೆಪ್ಟೆಂಬರ್ 4ರಂದು ಮುಂಜಾನೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ GSLV-F17 ರಾಕೆಟ್ 2,367 ಕೆ.ಜಿ. ತೂಕದ EOS-05 ಭೂ-ವೀಕ್ಷಣಾ ಉಪಗ್ರಹವನ್ನು ನಿಗದಿತ Sub-Geosynchronous Transfer Orbit (Sub-GTO)ಗೆ ಯಶಸ್ವಿಯಾಗಿ ಸೇರಿದ್ದು. ಇಸ್ರೋ ಅಧಿಕೃತವಾಗಿ ಮಿಷನ್ ಯಶಸ್ವಿಯಾಗಿದೆ ಎಂದು ಘೋಷಿಸಿದೆ. EOS-05 ಭಾರತದ ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ಚಿತ್ರಣ ಮಾಡುವ ಮೊದಲ ಉಪಗ್ರಹವಾಗಿದ್ದು, ಭೂಮಿಯಿಂದ ಸುಮಾರು 36,000 ಕಿ.ಮೀ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಥಾನದಿಂದ ಭಾರತ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿರಂತರ ಹಾಗೂ ಪುನರಾವರ್ತಿತ ವೀಕ್ಷಣೆಗೆ ಹೆಚ್ಚಿನ ಸಾಮರ್ಥ್ಯ ದೊರೆಯಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
(ಮಾಹಿತಿ ಅಪ್ಡೇಟ್ ಆಗಲಿದೆ)
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















