ಬಾಯಿ ಮಾತಿನ ಪ್ರಚಾರಕ್ಕೆ ಭರ್ಜರಿ ಗೆಲುವು – ₹2 ಕೋಟಿ ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಕಲೆಕ್ಷನ್ : ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ʼಹನುಮಾನ್ ಅಂಶʼ ಸಿನಿಮಾ ನಾಲ್ಕನೇ ವಾರಕ್ಕೆ ಭಾರತದಲ್ಲಿ ₹50 ಕೋಟಿ ನಿವ್ವಳ ಕಲೆಕ್ಷನ್ ದಾಟಿದೆ. ₹100 ಕೋಟಿ ಗಳಿಕೆಯ ನಿರೀಕ್ಷೆ ಮೂಡಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Vi ಲೋಗೋದಲ್ಲಿ ಮಹತ್ವದ ಬದಲಾವಣೆ – ಶಾರುಖ್ ಖಾನ್ ಜೊತೆ Vi ಹೊಸ ಅಭಿಯಾನ : ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆ ವೊಡಾಫೋನ್ ಐಡಿಯಾ (Vi) ತನ್ನ ಬ್ರ್ಯಾಂಡ್ ಗುರುತಿನಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ಅಭಿಯಾನದ ಮುಖವಾಗಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದು ಕೇವಲ ಲೋಗೋ ಬದಲಾವಣೆಯಲ್ಲ, ಗ್ರಾಹಕರಿಗೆ ಇನ್ನಷ್ಟು ಉತ್ತಮ ಅನುಭವ ಹಾಗೂ ಹೆಚ್ಚಿನ ಸಾಧ್ಯತೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಸಂಸ್ಥೆಯ ಬ್ರ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಕಾಸದ ಮೊದಲ ಹೆಜ್ಜೆಯಾಗಿದೆ ಎಂದು Vi CEO ಅಭಿಜಿತ್ ಕಿಶೋರ್ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಡಿನಿಂದ ನಾಡಿಗೆ ಚಿರತೆಗಳ ಹೆಜ್ಜೆ : ದಾಂಡೇಲಿ ಸುತ್ತಮುತ್ತಲಿನ ಕಾಡಂಚಿನ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ರಾತ್ರಿವೇಳೆ ಚಿರತೆಗಳ ಓಡಾಟ ಸಾಮಾನ್ಯವಾಗಿದ್ದು, ಇದುವರೆಗೆ ಮನುಷ್ಯರ ಮೇಲೆ ದಾಳಿ ನಡೆಸಿದ ವರದಿಗಳಿಲ್ಲ. ಸುಲಭ ಬೇಟೆಗಾಗಿ ಚಿರತೆಗಳು ಕಾಡಂಚಿನ ಪ್ರದೇಶಗಳಿಗೆ ಬಂದು ನಾಯಿಗಳನ್ನು ಬೇಟೆಯಾಡಿ ಕಾಡಿನತ್ತ ಮರಳುತ್ತಿವೆ ಎನ್ನಲಾಗಿದೆ. ಹೀಗಾಗಿ ಚಿರತೆಗಳ ಓಡಾಟವನ್ನು ತಡೆಯುವುದಕ್ಕಿಂತ ಮಾನವ–ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದಿನಿಂದ ಜಾಗತಿಕ ಮಾರುಕಟ್ಟೆಗೆ JioHotstar ಎಂಟ್ರಿ : JioHotstar ಸೆಪ್ಟೆಂಬರ್ 2ರಿಂದ UK, ಕೆನಡಾ ಮತ್ತು ಸಿಂಗಾಪುರದಲ್ಲಿ Hotstar ಆ್ಯಪ್ ಬದಲಿಗೆ ಸೇವೆ ಆರಂಭಿಸಿದೆ. 1.6 ಲಕ್ಷ ಗಂಟೆಗಳ ಕಂಟೆಂಟ್, Bigg Boss 24/7 ಲೈವ್ ಸ್ಟ್ರೀಮ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯ. ಜನಪ್ರಿಯ ‘ಬಿಗ್ ಬಾಸ್’ ಕಾರ್ಯಕ್ರಮದ 24/7 ಲೈವ್ ಸ್ಟ್ರೀಮ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. ವೀಕ್ಷಕರು ಕಾರ್ಯಕ್ರಮದ ಸಂದರ್ಭದಲ್ಲಿ ಲೈವ್ ಮತದಾನದಲ್ಲೂ ಭಾಗವಹಿಸುವ ಅವಕಾಶವನ್ನು ಪಡೆಯಲಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಸುದೀಪ್ ಬರ್ತ್‌ಡೇಗೆ ಭರ್ಜರಿ ಗಿಫ್ಟ್ – ‘ಬಿಲ್ಲ ರಂಗ ಬಾಷಾ’ ಫಸ್ಟ್ ಲುಕ್ ವೈರಲ್ : ಕನ್ನಡದ ಬಹುಮುಖ ಪ್ರತಿಭೆಯ ನಟ ಕಿಚ್ಚ ಸುದೀಪ್ ಇಂದು 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಅವರ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷಾ’ ಚಿತ್ರದ ಭರ್ಜರಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕಾರಣಾಂತರಗಳಿಂದ ವಿಳಂಬವಾಗಿದ್ದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಮತ್ತೆ ಆರಂಭವಾಗಿತ್ತು. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















