SK Home Ad
Home ನಮ್ಮ ಜಿಲ್ಲೆ ರಾಯಚೂರು ಗುರುರಾಯರಿಗೆ ರಂಗನಾಥಸ್ವಾಮಿಯ ಶೇಷವಸ್ತ್ರ ಸಮರ್ಪಣೆ

ಗುರುರಾಯರಿಗೆ ರಂಗನಾಥಸ್ವಾಮಿಯ ಶೇಷವಸ್ತ್ರ ಸಮರ್ಪಣೆ

0
71

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 355ನೇ ಆರಾಧನಾ ಮಹೋತ್ಸವ ಪೂರ್ವಾರಾಧನೆ ಅಂಗವಾಗಿ ಶನಿವಾರ ತಮಿಳುನಾಡಿನ ಸುಕ್ಷೇತ್ರ ಶ್ರೀರಂಗಂ ಶ್ರೀರಂಗನಾಥ ದೇವಸ್ಥಾನದ ಅಧಿಕಾರಿಗಳು ತಂದ ಶ್ರೀರಂಗನಾಥ ಸ್ವಾಮಿಯ ಶೇಷವಸ್ತ್ರವನ್ನು ಸಮರ್ಪಿಸಲಾಯಿತು.

ಇದಕ್ಕೂ ಮುನ್ನ ಚಂಡಿವ್ಯಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆಗೆದುಕೊಂಡು ಬರಲಾಯಿತು. ಮೊದಲಿಗೆ ಗ್ರಾಮದೇವತೆಯಾದ ಮಂಚಾಲಮ್ಮದೇವಿಗೆ ಶ್ರೀರಂಗದೇವಸ್ಥಾನದ ಅರ್ಚಕರು ಹಾಗೂ ಅಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಶೇಷವಸ್ತ್ರಗಳನ್ನು ಹಸ್ತಾಂತರಿಸಿದರು. ಶ್ರೀಮಠದ ಪ್ರಾಕಾರದಲ್ಲಿ ಶ್ರೀಪಾದಂಗಳವರ ಭಕ್ತಿಯಿಂದ ತಲೆಮೇಲೆ ಶೇಷವಸ್ತ್ರಗಳನ್ನಿಟ್ಟುಕೊಂಡು ಮಠದೊಳಗೆ ತೆಗೆದುಕೊಂಡು ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸಮರ್ಪಣೆ ಮಾಡಿದರು.