ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ಕ್ಯಾಸಲ್ ರಾಕ್ – ಮೀರಜ್ – ಕ್ಯಾಸಲ್ ರಾಕ್ ಕಾಯ್ದಿರಿಸದ ಎಕ್ಸ್ಪ್ರೆಸ್ ಜೋಡಿ ರೈಲಿಗೆ (17334/17333) ಬಾಗೇವಾಡಿ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ತಾತ್ಕಾಲಿಕ ನಿಲುಗಡೆ ಒದಗಿಸಿದೆ.
ಕ್ಯಾಸಲ್ ರಾಕ್ – ಮೀರಜ್ ಎಕ್ಸ್ಪ್ರೆಸ್ (17334) ಬಾಗೇವಾಡಿ ನಿಲ್ದಾಣಕ್ಕೆ ರಾತ್ರಿ 10:04ಕ್ಕೆ ಆಗಮಿಸಿ 10:05ಕ್ಕೆ ನಿರ್ಗಮಿಸಲಿದೆ. ಮೀರಜ್ – ಕ್ಯಾಸಲ್ ರಾಕ್ ಎಕ್ಸ್ಪ್ರೆಸ್ (17333) ಮಧ್ಯಾಹ್ನ 01:18ಕ್ಕೆ ಆಗಮಿಸಿ 01:19ಕ್ಕೆ ನಿರ್ಗಮಿಸಲಿದೆ.
ಈ ತಾತ್ಕಾಲಿಕ ನಿಲುಗಡೆಯು ಸೆಪ್ಟೆಂಬರ್ 1, 2026ರಿಂದ ಫೆಬ್ರವರಿ 28, 2027ರವರೆಗೆ ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
- ಕೊನೆಗೂ ಈಡೇರಿದ ಆಶಾ ಕಾರ್ಯಕರ್ತೆಯರ ಬೇಡಿಕೆ: ಫ್ರೀಡಂ ಪಾರ್ಕ್ ಹೋರಾಟ ಅಂತ್ಯ
- ರೈತರಿಗೆ ನ್ಯಾಯ ಕೊಡಿಸಲು ಕೋರ್ಟ್ ಮೆಟ್ಟಿಲೇರಲು ಸಿದ್ಧ
- ಕೊನೆಗೂ ಆಶಾ ಆದೇಶ ಪ್ರಕಟ; ಗುಲಾಬಿ ಸೇನೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ
- ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; 75ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕರೆಂಟ್ ಕಟ್!
- ರಾಜ್ಯ ಸರ್ಕಾರ ಇನ್ಮುಂದೆ ಅಕ್ಕಿ ಬದಲು ಆಹಾರ ಧಾನ್ಯಗಳ ಕಿಟ್! ರೇಷನ್ ಕಾರ್ಡ್ ದಾರರಿಗೆ ಹೊಸ ಸೌಲಭ್ಯ






















