ಮುಂಬಯಿ: ಎಸ್ಸೆಲ್ ಗ್ರೂಪ್‌ನ ಅಧ್ಯಕ್ಷರಾದ ಸುಭಾಷ್ ಚಂದ್ರ ಅವರು ರಿಲಯನ್ಸ್ ಗ್ರೂಪ್‌ನ ಭಾಗವಾಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ ಎಂದು ರಿಲಯನ್ಸ್ ಗ್ರೂಪ್ ವಕ್ತಾರರು ಹೇಳಿದ್ದಾರೆ.
ರಿಲಯನ್ಸ್ ಗ್ರೂಪ್‌ನ ಭಾಗವಾಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧದ ಆರೋಪಗಳು ಮತ್ತು ದುರುದ್ದೇಶಪೂರಿತ. ನಮ್ಮ ಮಾಧ್ಯಮ ಬ್ರ್ಯಾಂಡ್‌ಗಳನ್ನು ಯಾರ ವಿರುದ್ಧವೂ ವಾಗ್ದಾಳಿ ನಡೆಸಲು ಎಂದಿಗೂ ಬಳಸಲಾಗಿಲ್ಲ ಮತ್ತು ಮುಂದೆಯೂ ಬಳಸುವುದಿಲ್ಲ.
ವ್ಯಾಪಾರಸ್ಥ ಮತ್ತು ಉದ್ಯಮಿಯಾಗಿ ಸುಭಾಷ್ ಚಂದ್ರ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ ಎಂದು ರಿಲಯನ್ಸ್ ವಕ್ತಾರರು ಹೇಳಿದ್ದಾರೆ.






















