ವೀರೇಶ ಉಳ್ಳಾಗಡ್ಡಿ
ಬೆಂಗಳೂರು: ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಪೋಕ್ಸೋ ಪ್ರಕರಣ ಶೇ. 30ರಷ್ಟು ಹೆಚ್ಚಾಗಿದೆ. 2023ರಿಂದ ವರ್ಷದಿಂದ ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಏರುತ್ತಿವೆ. ಈ 3 ವರ್ಷದ ಅವಧಿಯಲ್ಲಿ ಒಟ್ಟು 13,085 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 3247 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ 3317 ಪ್ರಕರಣ ದಾಖಲಾಗಿ ಶೇ.2ರಷ್ಟು ಏರಿಕಯಾಗಿವೆ. 2025ರಲ್ಲಿ ಅತೀ ಹೆಚ್ಚು 3907 ಕೇಸ್ ಆಗಿದ್ದು, ದಿನಕ್ಕೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
2023ಕ್ಕೆ ಹೋಲಿಸಿದರೆ ಶೇ. 21ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ. 2026ರ ಜೂನ್ ತಿಂಗಳಲ್ಲಿ 383 ಕೇಸ್ ಹಾಗೂ ಜುಲೈ ತಿಂಗಳಲ್ಲಿ 415 ಕೇಸ್ ಪತ್ತೆಯಾಗಿದ್ದು, ಒಂದೇ ತಿಂಗಳಲ್ಲಿ 32 ಪ್ರಕರಣ ದಾಖಲಾಗಿ ಶೇ. 8.3ರಷ್ಟು ಹೆಚ್ಚಳವಾಗಿವೆ. ಈ ವರ್ಷ ಒಟ್ಟು 2614 ಪ್ರಕರಣಗಳು ದಾಖಲಾಗಿವೆ.
ಪೋಕ್ಸೋ ಪ್ರಕರಣಗಳಲ್ಲಿ ಮರ್ಯಾದೆಗೆ ಹೆದರಿ ದೂರುಗಳೇ ಬರದಿದ್ದುದೇ ಹೆಚ್ಚು. ಇನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಾಜಿ, ಪಂಚಾಯತಿ ಮಾಡಿ ಕೇಸ್‌ನ್ನು ಗ್ರಾಮದ ಹಿರಿಯರು ಅಲ್ಲೇ ಮುಚ್ಚಿ ಹಾಕಿತ್ತಾರೆ. ಹಲವು ಕಡೆ ವೈಯಕ್ತಿಕ ದ್ವೇಷದಿಂದ ಸುಳ್ಳು ಪ್ರಕರಣಗಳು ಸಹ ದಾಖಲಾಗುತ್ತವೆ. 2023ರ 3,247 ಕೇಸ್‌ಗಳಲ್ಲಿ 126 ಪ್ರಕರಣದ ಅಪರಾಧಿಗಳಿಗೆ ಹಾಗೂ 2024ರಲ್ಲಿ 3,317 ಕೇಸ್‌ಗಳಲ್ಲಿ 36 ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು ಉಳಿದ ಕೇಸ್ ತನಿಖೆ ಹಂತದಲ್ಲಿವೆ. 2025ರಲ್ಲಿ 3,907 ಕೇಸ್‌ಗಳಲ್ಲಿ 1,927 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ.
ಸಂತ್ರಸ್ತರಿಗೆ ಸಿಗದ ನ್ಯಾಯ:
- 2023ರಲ್ಲಿ 3,247 ಪೋಕ್ಸೋ ಕೇಸ್‌ಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 3,317ಕ್ಕೆ ಏರಿಕೆ
- 2026ರ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಒಟ್ಟು 2,614 ಪೋಕ್ಸೋ ಪ್ರಕರಣಗಳು ದಾಖಲಾಗಿವೆ
- ಮರ್ಯಾದೆಗೆ ಅಂಜಿ ದೂರು ನೀಡದಿರುವುದು ಮತ್ತು ಗ್ರಾಮೀಣ ಭಾಗಗಳಲ್ಲಿ ಪಂಚಾಯಿತಿಗಳ ಮೂಲಕ ಪ್ರಕರಣ ಮುಚ್ಚಿಹಾಕುವುದು ಇಂದಿಗೂ ಸವಾಲಾಗಿದೆ
2023-26ರವರೆಗೆ ದಾಖಲಾದ ಕೇಸ್
ವರ್ಷ ಪೋಕ್ಸೋ
2023 3,247
2024 3,317
2025 3,907
2026 2,614
ಒಟ್ಟು 13,085




















