ಬೆಂಗಳೂರು: ಬೆಂಗಳೂರಿನಿಂದ ಹೊಸೂರು ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು ₹9 ಕೋಟಿ ಲೆಕ್ಕವಿಲ್ಲದ ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸೂರು ರಸ್ತೆಯಲ್ಲಿ ಆಗಸ್ಟ್ 18ರಂದು ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನ ಆದಾಯ ತೆರಿಗೆ ಉಪ ನಿರ್ದೇಶಕ ಜಗದೀಶ್ ಅವರ ಕೋರಿಕೆಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಬಿಇಟಿಎಲ್ ಟೋಲ್ ನಂತರದ ಸಿಗ್ನಲ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕ್ರೆಟಾ ಕಾರನ್ನು ತಡೆದು ಪರಿಶೀಲಿಸಿದ್ದಾರೆ.
ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು, ಅವರಲ್ಲಿ ತಮಿಳುನಾಡಿನ ಜ್ಯುವೆಲ್ಲರ್ಸ್ ಸಂಬಂಧ ಹೊಂದಿದ್ದಾರೆ ಎನ್ನಲಾದ 42 ವರ್ಷದ ಸಚಿನ್ ಕೂಡ ಇದ್ದರು ಎಂದು ತಿಳಿದುಬಂದಿದೆ. ಕಾರಿನ ಪರಿಶೀಲನೆ ವೇಳೆ ಭಾರೀ ಪ್ರಮಾಣದ ನಗದು ಪತ್ತೆಯಾಗಿದ್ದು, ಅದರ ಮೂಲ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪತ್ತೆಯಾದ ನಗದು ಹಣಕ್ಕೆ ಸೂಕ್ತ ದಾಖಲೆಗಳು ಅಥವಾ ಲೆಕ್ಕಪತ್ರಗಳಿಲ್ಲದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಕಾರು ಹಾಗೂ ಅದರಲ್ಲಿದ್ದ ಇಬ್ಬರನ್ನು ಆದಾಯ ತೆರಿಗೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿರುವ ಸಂಬಂಧಿತ ವ್ಯಕ್ತಿಯ ನಿವಾಸದ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸುಮಾರು ₹1.3 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಒಟ್ಟಾರೆ ಭಾರೀ ಪ್ರಮಾಣದ ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಣದ ಮೂಲ, ಯಾರಿಗೆ ಸೇರಿದ್ದು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳಿವೆಯೇ ಎಂಬುದರ ಕುರಿತು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
- ‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವನತಾರಾ ಬೆಂಬಲ
- ಸ್ಯಾಂಡಲ್ವುಡ್ಗೆ ನಭಾ ನಟೇಶ್ ಕಂಬ್ಯಾಕ್ ಧ್ರುವ ಸರ್ಜಾ ‘ಕೆಮಿಸ್ಟ್ರಿ’ ಘೋಷಣೆ
- KPSC ಹಗರಣ: ಶಾಂತಾ ಹೊಸಮನಿಗೆ ಸದ್ಯ ರಿಲೀಫ್ ಇಲ್ಲ
- ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್
- ಕೇಂದ್ರದ ಮಹತ್ವದ ಘೋಷಣೆ : ಸಾರಿಗೆ ಕ್ಷೇತ್ರಕ್ಕೆ ಹೊಸ ಮಾಸ್ಟರ್ ಪ್ಲಾನ್ – ITLAಗೆ ಅಸ್ತು, ₹10,000 ಕೋಟಿ SME ನಿಧಿಗೂ ಒಪ್ಪಿಗೆ






















