SK Home Ad
Home ಸಿನಿ ಮಿಲ್ಸ್ ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್

ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್

0
175

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಹಾಗೂ ಪಾವನಾ ವಿವಾಹಕ್ಕೆ ಮುಹೂರ್ತ ನಿಕ್ಕಿಯಾಗಿದೆ.

ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಹಸೆಮಣೆ ಏರಲು ಸಜ್ಜಾಗಿದೆ. ಆಗಸ್ಟ್ 29 ಮತ್ತು 30ರಂದು ಮೈಸೂರಿನಲ್ಲಿ ವಿವಾಹ ಸಂಭ್ರಮ ನಡೆಯಲಿದೆ. ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಚಿಕ್ಕಣ್ಣ, ಇದೀಗ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ.

ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಸಪ್ತಪದಿ ತುಳಿಯಲಿದ್ದು, ಈಗಾಗಲೇ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ನಾಯಕ ನಟನಾಗಿ ತೊಡಗಿಸಿಕೊಂಡಿರುವ ಚಿಕ್ಕಣ್ಣನ ಮದುವೆಗೆ ಚಿತ್ರರಂಗದ ಅಪಾರ ಸ್ನೇಹಿತರು ಆಗಮಿಸಲಿದ್ದಾರೆ.

ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.