SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ನೇಣಿಗೆ ಶರಣಾದ ಪತ್ನಿ: ಜೀವ ಉಳಿಸದೆ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿಯುತ್ತ ಕುಳಿತ ಪತಿ..!

ನೇಣಿಗೆ ಶರಣಾದ ಪತ್ನಿ: ಜೀವ ಉಳಿಸದೆ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿಯುತ್ತ ಕುಳಿತ ಪತಿ..!

0
8

ಬಾಗಲಕೋಟೆ: ಪತ್ನಿ ಕಣ್ಣೆದುರಿಗೆ ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದರೆ, ಆಕೆಯ ಜೀವ ಉಳಿಸಬೇಕಿದ್ದ ಪತಿರಾಯ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತ ಕುಳಿತು ಆಕೆಯ ಸಾವಿಗೆ ಕಾರಣವಾಗಿರುವ ದಾರುಣ ಘಟನೆ ಬೀಳಗಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ.

ಭಾಗ್ಯಶ್ರೀ ಉರ್ಫ್ ಪ್ರಗತಿ ಜಿಗಳೂರ(23) ಮೃತ ದುರ್ದೈವಿ. ಪತಿ ಪ್ರವೀಣ ಕಿರುಕುಳದಿಂದ ಆಕೆ ಜೀವ ಬಿಟ್ಟಿರುವ ಆರೋಪ ಕೇಳಿ ಬಂದಿದೆ. ದಂಪತಿಗೆ ಒಂದು ಗಂಡು ಮಗುವಿದ್ದು, ಕಳೆದ 6 ವರ್ಷಗಳ ಹಿಂದೆ ಮದುವೆ ಆಗಿದ್ದರು.

ತವರು ಮನೆಗೆ ಹೋಗಿದ್ದ ಭಾಗ್ಯಶ್ರೀ ಹಾಗೂ ಪತಿ ಪ್ರವೀಣ ಮಧ್ಯೆ ಜಗಳವಾಗಿ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದಳು. ಆಕೆಯನ್ನು ಪ್ರವೀಣ ಈಚೆಗೆ ಮನೆಗೆ ಕರೆತಂದಿದ್ದ.

ಸಾವಿನ ನಿಖರ ಕಾರಣ ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಸ್ಪಿ ಸಿದ್ಧಾರ್ಥ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ