SK Home Ad
Home ಸುದ್ದಿ ದೇಶ ‘ಮನ್ ಕಿ ಬಾತ್’: ಕಾರ್ಗಿಲ್ ಯೋಧರಿಗೆ ನಮನ – ಜಲ ಸಂರಕ್ಷಣೆಗೆ ಕರೆ

‘ಮನ್ ಕಿ ಬಾತ್’: ಕಾರ್ಗಿಲ್ ಯೋಧರಿಗೆ ನಮನ – ಜಲ ಸಂರಕ್ಷಣೆಗೆ ಕರೆ

0
59

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಭಾರತದ ಶೌರ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಅಮರ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 136ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಮಳೆಗಾಲದಲ್ಲಿ ಜಲ ಸಂರಕ್ಷಣೆಯ ಮಹತ್ವವನ್ನು ಕುರಿತು ಹೇಳುತ್ತಾ, ‘ಕ್ಯಾಚ್ ದಿ ರೇನ್’ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಇದನ್ನೂ ಓದಿ: ಬಾರ್ ಬಳಿ ಕಾರು ಸ್ಫೋಟ: ಬೆಚ್ಚಿಬಿದ್ದ ಹಿಪ್ಪರಗಿ ಜನ..!

‘ಕಾರ್ಗಿಲ್ ವಿಜಯ್ ದಿವಸ್ ಕೇವಲ ದಿನಾಂಕವಲ್ಲ’ : ಪ್ರಧಾನಿ ಮೋದಿ ಮಾತನಾಡುತ್ತಾ, “ಕಾರ್ಗಿಲ್ ವಿಜಯ್ ದಿವಸ್ ಎಂಬುದು ಕೇವಲ ಕ್ಯಾಲೆಂಡರ್‌ನಲ್ಲಿರುವ ಒಂದು ದಿನಾಂಕವಲ್ಲ. ಅದು ನಮ್ಮ ದೇಶದ ಶೌರ್ಯ, ಧೈರ್ಯ ಮತ್ತು ತ್ಯಾಗದ ಅಮರ ಕಥೆಯಾಗಿದೆ. ದೇಶದ ಗಡಿಗಳನ್ನು ರಕ್ಷಿಸಲು ನಮ್ಮ ಯೋಧರು ತೋರಿದ ಸಾಹಸ ಪ್ರತಿಯೊಬ್ಬ ಭಾರತೀಯನಿಗೂ ಸದಾ ಪ್ರೇರಣೆಯಾಗಿದೆ,” ಎಂದು ಹೇಳಿದರು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿದ ಅವರು, ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಮಳೆನೀರಿನ ಪ್ರತಿಯೊಂದು ಹನಿಯನ್ನೂ ಉಳಿಸಿ : ಮಳೆಗಾಲದ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ, ಜುಲೈ 4ರಿಂದ ದೇಶಾದ್ಯಂತ ನಡೆಯುತ್ತಿರುವ ‘ಕ್ಯಾಚ್ ದಿ ರೇನ್’ ಅಭಿಯಾನವನ್ನು ಜನಾಂದೋಲನವಾಗಿ ರೂಪಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಐರನ್ ಮ್ಯಾನ್ ಟು ಡಾಕ್ಟರ್ ಡೂಮ್: ‘ಅವೆಂಜರ್ಸ್’ ಪೋಸ್ಟರ್ ವೈರಲ್!

“ಮಳೆನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ. ಇಂಗುಗುಂಡಿಗಳು, ಕೆರೆಗಳು, ಬಾವಿಗಳು ಹಾಗೂ ಇತರ ಜಲಮೂಲಗಳ ಮೂಲಕ ಮಳೆನೀರನ್ನು ಸಂಗ್ರಹಿಸಿ ಭೂಗರ್ಭ ಜಲಮಟ್ಟ ಹೆಚ್ಚಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ನೀರಿನ ಸಂರಕ್ಷಣೆ ಭವಿಷ್ಯದ ಪೀಳಿಗೆಗೆ ನೀಡುವ ದೊಡ್ಡ ಕೊಡುಗೆಯಾಗಿದೆ,” ಎಂದು ಪ್ರಧಾನಿ ಹೇಳಿದರು.

‘ಮನ್ ಕಿ ಬಾತ್’ಗೆ 100 ಕೋಟಿ ಜನರ ಸ್ಪರ್ಶ : ಕಾರ್ಯಕ್ರಮದ ಜನಪ್ರಿಯತೆಯನ್ನು ಉಲ್ಲೇಖಿಸಿದ ಪ್ರಧಾನಿ, ಪ್ರಸಾರ ಭಾರತಿ ಮತ್ತು ಐಐಎಂ ರೋಹ್ಟಕ್ ನಡೆಸಿದ ಅಧ್ಯಯನದ ಮಾಹಿತಿಯನ್ನು ಹಂಚಿಕೊಂಡರು. ಅಧ್ಯಯನದ ಪ್ರಕಾರ, ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಒಂದು ಬಾರಿಯಾದರೂ 100 ಕೋಟಿ (1 ಬಿಲಿಯನ್) ಜನರು ಆಲಿಸಿದ್ದಾರೆ. ಅಲ್ಲದೆ, ದೇಶದ 96 ಶೇಕಡಾ ಜನರಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಇದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ: ‘ಪಾರ್ಟ್ನರ್’ಗಾಗಿ ಒಂದಾದ ಅಜೇಯ್ ರಾವ್ – ಕುನಾಲ್ ಗಾಂಜಾವಾಲ

ಸಮಾಜದ ಸಕಾರಾತ್ಮಕ ಕಥೆಗಳಿಗೆ ವೇದಿಕೆ : ‘ಮನ್ ಕಿ ಬಾತ್’ ಕಾರ್ಯಕ್ರಮವು ಸಮಾಜ, ಶಿಕ್ಷಣ, ಪರಿಸರ, ಸಂಸ್ಕೃತಿ, ನಾವೀನ್ಯತೆ ಮತ್ತು ದೇಶದ ವಿವಿಧ ಭಾಗಗಳಲ್ಲಿನ ಸ್ಫೂರ್ತಿದಾಯಕ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಪ್ರಮುಖ ವೇದಿಕೆಯಾಗಿ ಬೆಳೆದಿದೆ ಎಂದು ಪ್ರಧಾನಿ ಹೇಳಿದರು.

ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಹಾಗೂ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಿಂದಿ ಸೇರಿದಂತೆ ಭಾರತದ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಸಾರ ಮಾಡಲಾಯಿತು.